HomeBreaking NewsLatest NewsPoliticsSportsCrimeCinema

ಕೋವಿಡ್ ಭೀತಿ: ಹೊಸ ವರ್ಷಾಚರಣೆಗೆ ಪ್ರತ್ಯೇಕ ಗೈಡ್ ಲೈನ್ಸ್ ಇಲ್ಲ- ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್.

03:57 PM Dec 20, 2023 IST | prashanth

ಬೆಂಗಳೂರು, ಡಿಸೆಂಬರ್, 20,2023(www.justkannada.in):  ಪಕ್ಕದ ರಾಜ್ಯ ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ಆಲರ್ಟ್ ಆಗಿರುವ ಆರೋಗ್ಯ ಇಲಾಖೆ ಈಗಾಗಲೇ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ಹೊಸವರ್ಷಾಚರಣೆ ವೇಳೆಯೇ ಕೋವಿಡ್ ಭೀತಿ ಎದುರಾಗಿದೆ.

ಈ ಕುರಿತು ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಪ್ರತ್ಯೇಕ ಗೈಡ್​ಲೈನ್ಸ್​ ಇರಲ್ಲ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊವಿಡ್​ ಪ್ರಕರಣ ಹೆಚ್ಚಳವಾಗಿಲ್ಲ. ಹೀಗಾಗಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಬಿಬಿಎಂಪಿ PHC, ನಮ್ಮ ಕ್ಲಿನಿಕ್ ಕೋವಿಡ್ ಸಿದ್ಧತೆಗಳ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ಕೇಳಿದೆ. ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ SARI, ILI ಕೇಸ್ ಮೇಲೆ ನಿಗಾ ಇಡಲು ಬಿಬಿಎಂಪಿ ಮುಂದಾಗಿದೆ. ಕೋವಿಡ್ ಸಂಬಂಧ ಆರೋಗ್ಯಾಧಿಕಾರಿಗಳ ಸಭೆ ನಡೆಸಲು ಸೂಚನೆ ನೀಡಿದ್ದು, ಹೊಸವರ್ಷಾಚರಣೆಗೆ ಯಾವುದೇ ಪ್ರತ್ಯೇಕ ಗೈಡ್ ಲೈನ್ಸ್ ಇರುವುದಿಲ್ಲ ಎಂದರು.

Key words:Covid -No separate- guidelines - New Year -celebration - BBMP - Tushar Girinath

Tags :
BBMPCovid -No separate- guidelines - New Year -celebrationTushar Girinath
Next Article