HomeBreaking NewsLatest NewsPoliticsSportsCrimeCinema

ಕೋವಿಡ್ ಹಗರಣ: ಮಧ್ಯಂತರ ವರದಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಉಲ್ಲೇಖ-ಸಚಿವ ಪ್ರಿಯಾಂಕ್ ಖರ್ಗೆ

12:55 PM Sep 02, 2024 IST | prashanth

ಬೆಂಗಳೂರು,ಸೆಪ್ಟಂಬರ್,2,2024 (www.justkannada.in): ಕೋವಿಡ್ ಹಗರಣ ಸಂಬಂಧ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಅಕ್ರಮ ನಡೆದಿದೆ ಎಂದು ವರದಿಯಲ್ಲೂ ಉಲ್ಲೇಖವಾಗಿದೆ ಎಂದು ಗ್ರಾಮೀಣಾಭಿವೃದ್ದಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಮಧ್ಯಂತರ ವರದಿಯಲ್ಲಿ ಏನಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲ ಅಂತಿಮ ವರದಿಯಲ್ಲಿ ಏನಿದೆ ಮುಂದೆ ಗೊತ್ತಾಗುತ್ತೆ .ಮಧ್ಯಂತರ ವರದಿಯನ್ನ ಸಂಪುಟದಲ್ಲಿ  ಸಿಎಂ ಇಟ್ಟಾಗ ಗೊತ್ತಾಗುತ್ತೆ.  ಇದರ ಆಳ ಅಗಲ ಎಷ್ಟಿದೆ ಎಂದು ಮಾಧ್ಯಮಗಳಿಗೆ ಗೊತ್ತಿದೆ ಎಂದರು.

ಒತ್ತಡ ಹಾಕಿ ವರದಿ ತರಿಸಿಕೊಂಡಿದ್ದಾರೆಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಒತ್ತಡ ಹಾಕಿ ವರದಿ ತರಿಸಿಕೊಳ್ಳುವದಲ್ಲಿ ತಪ್ಪೇನಿದೆ. ತನಿಖಾ ಸಂಸ್ಥೆಗಳೂ ಬೇಗ ತನಿಖೆ ಮುಗಿಸಿ ಎಂದು  ಹೇಳುತ್ತೇವೆ ಇಲ್ಲವಾದರೆ ಜನರಿಗೆ ನಮ್ಮ ಮೇಲೆ ಅನುಮಾನ ಬರಲಿದೆ. ಕೋವಿಡ್  ಹಗರಣದಲ್ಲಿ ಅಧಿಕಾರಿಗಳು ಸಾಕ್ಷ್ಯನಾಶ ಮಾಡಿರಬಹುದು ಎಂದರು.

ಸಿಎಂ ಸದನದಲ್ಲಿ ಹೇಳಿರುವ 21 ಹಗರಣ ಕೇವಲ ಟ್ರೈಲರ್

ಸಿಎಂ ಸದನದಲ್ಲಿ ಹೇಳಿರುವ 21 ಹಗರಣ ಕೇವಲ ಟ್ರೈಲರ್. ಎಲ್ಲವನ್ನೂ ನಾವು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಕಾನೂನಾತ್ಮಕವಾಗಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಬಿಜೆಪಿಯವರಿಗೂ ಅನುಮಾನ ಬೇಡ ಎಂದು ಪ್ರಿಯಾಂಕ್ ಖರ್ಗೆ ಟಾಂಗ್ ಕೊಟ್ಟರು.

Key words: Covid Scam,  Interim Report, Minister, Priyank Kharge

Tags :
covid scaminterim reportministerPriyank Kharge
Next Article