HomeBreaking NewsLatest NewsPoliticsSportsCrimeCinema

ಕೆಆರ್ ಎಸ್ ಭರ್ತಿಯಾಗುತ್ತಿರುವಾಗಲೇ ಶಾಕ್: ತಮಿಳುನಾಡಿಗೆ ನಿತ್ಯ 1ಟಿಎಂಸಿ ನೀರು ಹರಿಸಲು CWRC ಶಿಫಾರಸ್ಸು

05:18 PM Jul 11, 2024 IST | prashanth

ನವದೆಹಲಿ,ಜುಲೈ,11,2024 (www.justkannada.in):  ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳಲ್ಲಿ ಜೀವ ಕಳೆ ಬಂದಿದೆ. ಕಳೆದ ಬಾರಿ ಮಳೆ ಕೈಕೊಟ್ಟಿದ್ದಕ್ಕೆ ಸಂಪೂರ್ಣವಾಗಿ ಖಾಲಿ ಡೆತ್​ ಸ್ಟೋರೇಜ್ ತಲುಪಿದ್ದ ಕಾವೇರಿಗೆ ನೀರು ಹರಿದುಬರುತ್ತಿದ್ದು   ಕೆಆರ್ ಎಸ್ ಜಲಾಶಯ  ಭರ್ತಿಯತ್ತ ಸಾಗುತ್ತಿದೆ. ಈ ಮಧ್ಯೆಯೇ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಸಮಿತಿ ಶಾಕ್ ನೀಡಿದೆ.

ಪ್ರತಿನಿತ್ಯ ತಮಿಳುನಾಡಿಗೆ 1 ಟಿಎಂಸಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶಿಸಿದೆ.  ಜುಲೈ 12ರಿಂದ 31ರವರೆಗೆ ಪ್ರತಿನಿತ್ಯ ತಮಿಳುನಾಡಿಗೆ 1 ಟಿಎಂಸಿ ಕಾವೇರಿ ನೀರು ಹರಿಸಲು ಆದೇಶಿಸಿದೆ.

ಇಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ನೀರು ಬಿಡುವಂತೆ ತಮಿಳುನಾಡು ವಾದ ಮಾಡಿದೆ. ಇದಕ್ಕೆ ಪ್ರತಿಯಾಗಿ ಕರ್ನಾಟಕವೂ ಸಹ ಕಾವೇರಿಯಲ್ಲಿ ನೀರಿನ ಕೊರತೆ ಇದೆ. ಈ ಮಾನ್ಸೂನ್ ಸಾಮಾನ್ಯವಾಗಿಲ್ಲ, 28% ಮಳೆ ಕೊರತೆಯಾಗಿದೆ. ಹೀಗಾಗಿ ನೀರು ಬಿಡಲು ಆಗುವುದಿಲ್ಲ ಎಂದು ಕರ್ನಾಟಕದ ಪರ ಅಧಿಕಾರಿಗಳು ವಾದ ಮಂಡಿಸಿದ್ದಾರೆ.

ಎರಡೂ ರಾಜ್ಯಗಳ ವಾದ-ಪ್ರತಿವಾದ ಆಲಿಸಿದ CWRC, ಜುಲೈ 12ರಿಂದ 31ರವರೆಗೆ  ಪ್ರತಿನಿತ್ಯ 1 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿ ಆದೇಶ ಹೊರಡಿಸಿದೆ. ಕೆಆರ್ ಎಸ್ ಜಲಾಶಯ 104 ಅಡಿಗೆ ತಲುಪಿದ್ದು ಭರ್ತಿಯಾಗಲು ಇನ್ನೂ 20 ಅಡಿ ಬಾಕಿ ಇದೆ. ಹೀಗಿರುವಾಗಲೇ ಪ್ರತಿನಿತ್ಯ 1ಟಿಎಂಸಿ ನೀರು ಬಿಡುವಂತೆ ಆದೇಶಿಸಿರುವುದು ರಾಜ್ಯದ ಜನರ ಆಕ್ರೋಶಕ್ಕೆ ತುತ್ತಾಗಿದೆ.

Ke words: CWRC, Tamilunadu, water, karnataka

Tags :
CWRCkarnatakatamilunaduwater
Next Article