For the best experience, open
https://m.justkannada.in
on your mobile browser.

ಡಿ ಬಾಸ್ ಹೊಸ ಸಿನಿಮಾ ‘D-57’ಕ್ಕೆ ಬೆಂಗಳೂರಲ್ಲಿ ಮುಹೂರ್ತ

11:15 AM Nov 03, 2023 IST | thinkbigh
ಡಿ ಬಾಸ್ ಹೊಸ ಸಿನಿಮಾ ‘d 57’ಕ್ಕೆ ಬೆಂಗಳೂರಲ್ಲಿ ಮುಹೂರ್ತ

ಬೆಂಗಳೂರು, ನವೆಂಬರ್ 03, 2023 (www.justkannada.in): ಡಿ ಬಾಸ್ ದರ್ಶನ್ ನಟಿಸುತ್ತಿರುವ ಹೊಸ ಸಿನಿಮಾ D-57 ಚಿತ್ರಕ್ಕೆ ಬೆಂಗಳೂರಿನ ದೊಡ್ಡ ಮಹಾ ಗಣಪತಿ ದೇವಸ್ಥಾನದಲ್ಲಿ ಮುಹೂರ್ತ ಮಾಡಲಾಗಿದೆ.

ತಾರಕ್ ಚಿತ್ರದ ನಿರ್ದೇಶಕ ಮಿಲನಾ ಪ್ರಕಾಶ್ ಚಿತ್ರಕ್ಕೆ ಆ್ಯಕ್ಸನ್ ಕಟ್ ಹೇಳುತ್ತಿದ್ದಾರೆ.  ಅಂದಹಾಗೆ ಸದ್ತ ನಟ ದರ್ಶನ್ ಕಾಟೇರ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಜತೆಗೆ ಅತಿಥಿ ಪಾತ್ರದಲ್ಲಿ ನಟಿಸಿರುವ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾ ಇದೇ ನವೆಂಬರ್ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಜೈ ಮಾತಾ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ನನ್ನ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರ ಹೊಸ ಸಿನೆಮಾದ ಮುಹೂರ್ತ ಇಂದು ಬೆಂಗಳೂರಿನ ದೊಡ್ಡ ಮಹಾ ಗಣಪತಿ ದೇವಸ್ಥಾನದಲ್ಲಿ ನೆಡೆಯಿತು ಎಂದು ಮಿಲನಾ ಪ್ರಕಾಶ್ ಟ್ವೀಟ್ ಮಾಡಿ ಕೆಲ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

Tags :

.