For the best experience, open
https://m.justkannada.in
on your mobile browser.

ನಟ ದರ್ಶನ್ ಬಂಧನ ವಿಚಾರ: ಮೌನಕ್ಕೆ ಜಾರಿದ ಲವ್ಲಿಸ್ಟಾರ್ ಪ್ರೇಮ್: ಹೆಚ್.ವಿಶ್ವನಾಥ್  ಪ್ರತಿಕ್ರಿಯಿಸಿದ್ದು ಹೀಗೆ

05:05 PM Jun 19, 2024 IST | prashanth
ನಟ ದರ್ಶನ್ ಬಂಧನ ವಿಚಾರ  ಮೌನಕ್ಕೆ ಜಾರಿದ ಲವ್ಲಿಸ್ಟಾರ್ ಪ್ರೇಮ್  ಹೆಚ್ ವಿಶ್ವನಾಥ್  ಪ್ರತಿಕ್ರಿಯಿಸಿದ್ದು ಹೀಗೆ

ಮೈಸೂರು,ಜೂನ್,19,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು  ನಟ ಲವ್ಲಿಸ್ಟಾರ್ ಪ್ರೇಮ್ ನಿರಾಕರಿಸಿದ್ದು,  ಇತ್ತ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ದರ್ಶನ್ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ಹೇಳಿದರು.

ಈ ಕುರಿತು ಮೈಸೂರಿನ ಬನ್ನೂರಿನಲ್ಲಿ ಪ್ರತಿಕ್ರಿಯಸಲು ನಿರಾಕರಿಸಿದ ನಟ ಪ್ರೇಮ್, ದರ್ಶನ್ ಹೆಸರು ಹೇಳುತ್ತಿದ್ದಂತೆ ಪ್ಲೀಸ್ ಎಂದು ಮನವಿ ಮಾಡಿದರು.  ನಾನು ಬಂದಿರುವ ಕಾರ್ಯಕ್ರಮ ಬೇರೆ. ದಯಮಾಡಿ ಆ ಕಾರ್ಯಕ್ರಮದ ಬಗ್ಗೆ ಮಾತಾಡಿ. ದರ್ಶನ್ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದರು. ಈ ಮೂಲಕ ಆಪ್ತ ಗೆಳೆಯನ ಬಗ್ಗೆ ಮಾತನಾಡಲು ನಟ ಪ್ರೇಮ್ ಅಂತರ ಕಾಯ್ದುಕೊಂಡರು.

ಡಾ. ರಾಜಕುಮಾರ್ ಅವರನ್ನು ನೋಡಿಕೊಂಡು ಕಲಿಯಲಿಲ್ಲ ಎಂದರೆ ಹೇಗೆ? ಹೆಚ್ ವಿಶ್ವನಾಥ್

ದರ್ಶನ್ ಪ್ರಕರಣ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಹೆಚ್. ವಿಶ್ವನಾಥ್, ನಮ್ಮ ನಾಡು ಕಲೆ, ಸಂಸ್ಕೃತಿ, ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾದುದು. ಕಲಾವಿದರಿಗೆ ಸಾಂಸ್ಕೃತಿಕ ಲೋಕದವರಿಗೆ ಅನುಕರಣೀಯ, ಆದರಿಣೀಯವಾದವರು ಡಾ ರಾಜಕುಮಾರ್.ಅವರನ್ನು ನೋಡಿಕೊಂಡು ಕಲಿಯಲಿಲ್ಲ ಎಂದರೆ ಹೇಗೆ. ದರ್ಶನ್ ಬಗ್ಗೆ ಮಾತನಾಡಿ ನಾನೇಕೆ ಸಾಕ್ಷಿ ಹೇಳಲು ಹೋಗಿ ನಿಲ್ಲಬೇಕು. ದರ್ಶನ್ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ ಎಂದರು.

ಕಳೆದ 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಟ ದರ್ಶನ್ ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಆಗ ದರ್ಶನ್ ಅವರ ತಾಯಿ ಕಾಂಗ್ರೆಸ್ ನಲ್ಲಿ ಇದ್ದರು. ಹಾಗಾಗಿ ನಟ ದರ್ಶನ್ ನನ್ನ ಪರವಾಗಿ ಮೈಸೂರಿನಿಂದ ಕೊಡಗಿನವರೆಗೂ ಪ್ರಚಾರ ಮಾಡಿದರು ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

Key words:  Darshan, arrest, Lovelist Prem, H. Vishwanath

Tags :

.