HomeBreaking NewsLatest NewsPoliticsSportsCrimeCinema

ದರ್ಶನ್ ವಿಚಾರದಲ್ಲಿ ಯಾರು ಹಸ್ತಕ್ಷೇಪ ಮಾಡಿಲ್ಲ, ಅದರ ಅವಶ್ಯಕತೆಯೂ ಇಲ್ಲ- ಗೃಹ ಸಚಿವ ಪರಮೇಶ್ವರ್

05:24 PM Jun 21, 2024 IST | prashanth

ಬೆಂಗಳೂರು,ಜೂನ್,21,2024 (www.justkannada.in):  ನಟ ದರ್ಶನ್ ಪ್ರಕರಣ ವಿಚಾರಲ್ಲಿ ಯಾರೂ ಹಸ್ತಕ್ಷೇಪ ಮಾಡಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಪ್ರಕರಣದಲ್ಲಿ  ಯಾರು ಹಸ್ತಕ್ಷೇಪ ಮಾಡಿಲ್ಲ. ನಮ್ಮ ಬಳಿ ಯಾರೂ ಕೂಡ ಬಂದಿಲ್ಲ. ಪ್ರಕರಣದಲ್ಲಿ ಪ್ರಭಾವ ಬೀರಲು ಈವರೆಗೂ ಯಾರು ಮಧ್ಯ ಪ್ರವೇಶಿಸಿಲ್ಲ. ಅದರ ಅವಶ್ಯಕತೆಯೂ ಇಲ್ಲ. ನನ್ನ ಬಳಿಯಾಗಲಿ, ಮುಖ್ಯಮಂತ್ರಿಯಾಗಲಿ ಚರ್ಚೆ ಮಾಡಿಲ್ಲ. ರೇಣುಕಾ ಸ್ವಾಮಿ ಕೊಲೆ ಪ್ರಕರಣವನ್ನು ಬಿಜೆಪಿ ಅಥವಾ ಕಾಂಗ್ರೆಸ್‌‍ ಎಂದು ಪಕ್ಷದ ಆಧಾರದ ಮೇಲೆ ನೋಡುವುದಿಲ್ಲ. ಯಾವ ತಪ್ಪು ನಡೆದಿದೆ ಎಂಬ ಪುರಾವೆ ಮೂಲಕವೇ ಕ್ರಮ ಕ್ರಮ ಕೈಗೊಳ್ಳ ಲಾಗುತ್ತಿದೆ ಎಂದರು.

ವಾಲ್ಮಿಕಿ ನಿಗಮದಲ್ಲಿ ಅಕ್ರಮ  ವಿಚಾರ ಎಸ್ ಐಟಿ ತನಿಖೆ ಮಾಡುತ್ತಿದೆ.  ಅಧಿಕೃತವಾಗಿ ಸಿಬಿಐ ಅಧಿಕಾರಿಗಳು ನಮ್ಮನ್ನ ಏನು ಕೇಳಿಲ್ಲ  ಎಂದರು.

ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಕೆ ಶಿವಕುಮಾರ್  ಸ್ಪರ್ಧೆ ವಿಚಾರ,  ಡಿಕೆ ಶಿವಕುಮಾರ್ ಸಹೋದರ ಸಂಸತ್ ಗೆ ಹೋಗಬೇಕಿತ್ತು.  ಆದರೆ ಅದು ಆಗಲಿಲ್ಲ. ಹೀಗಾಗಿ ಒಳ್ಳಯೆ   ಅಭ್ಯರ್ಥಿ ಹಾಕ್ತಿವಿ ಅಂತಾ ಇರಬಹುದು. ಸಾಂದರ್ಭಿಕವಾಗಿ ಕೆಲವೊಮ್ಮೆ ಬೇರೆ ಆಯ್ಕೆ ಇದೆ ಎಂದರು.

Key words: darshan, case, Minister,  Parameshwar

Tags :
No one - interfered – darshan-case- Home Minister- Parameshwar
Next Article