For the best experience, open
https://m.justkannada.in
on your mobile browser.

DASARA LIGHTINGS: ಸೌಂಧರ್ಯ ಸೆರೆಗೆ “DRONE”ಆಚಾರ್ಯ ನೆರವಿಗೆ ಸೆಸ್ಕಾಂ ಚಿಂತನೆ..!

12:21 PM Sep 13, 2024 IST | mahesh
dasara lightings  ಸೌಂಧರ್ಯ ಸೆರೆಗೆ “drone”ಆಚಾರ್ಯ ನೆರವಿಗೆ ಸೆಸ್ಕಾಂ ಚಿಂತನೆ

Lightings is a key highlight of the renowned Mysore Dussehra festival, featuring a special lighting design in a "warm white" concept that complements the illumination of the  Ambavilas Palace.

ಮೈಸೂರು, ಸೆ.13,2024 (www.justkannada.in news) ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಗಳಲ್ಲಿ ದೀಪಾಲಂಕಾರ ಪ್ರಮುಖವಾದದ್ದು. ಈ ಬಾರಿಯ ವಿಶೇಷ ಅಂದ್ರೆ ಅಂಬವಿಲಾಸ ಅರಮನೆಯ ದೀಪಾಲಂಕಾರಕ್ಕೆ ಸರಿಹೊಂದುವಂತೆ  “ವಾರ್ಮ್‌ ವೈಟ್‌ “ ಪರಿಕಲ್ಪನೆಯಲ್ಲಿ ದೀಪಾಲಂಕಾರ ಮಾಡುತ್ತಿರುವುದು.

ಸೆಸ್ಕಾಂ (ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ) ಪ್ರತೀ ವರ್ಷ ಮೈಸೂರು ದಸರಾ ಹಬ್ಬದ ವೇಳೆ ದೀಪಾಲಂಕಾರವನ್ನು ಆಯೋಜಿಸುತ್ತದೆ. ಈ ವೇಳೆ ಮೈಸೂರು ನಗರವನ್ನು ಆಕರ್ಷಕ ದೀಪಗಳಿಂದ ಸಿಂಗಾರ ಮಾಡಲಾಗುತ್ತದೆ, ಇದರಿಂದ ದಸರಾ ಹಬ್ಬದ ಸಾಂಸ್ಕೃತಿಕ ಮಹತ್ವ “ಹೈಲೈಟ್” ಆಗುತ್ತದೆ.  ಸೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕ  ಕೆ.ಎಂ.ಮುನಿಗೋಪಾಲರಾಜು ಅವರು ದಸರಾ ಮಹೋತ್ಸವದ ದೀಪಾಲಂಕಾರದ ಸಿದ್ಧತೆ ಬಗ್ಗೆ “ ಜಸ್ಟ್‌ ಕನ್ನಡ “ ಜತೆ ಮಾತನಾಡಿದರು.

ಈಗಾಗಲೇ ನಗರದ ಮುಖ್ಯ ರಸ್ತೆಗಳು, ಸರ್ಕಲ್‌ಗಳು, ಹಾಗೂ ಪ್ರಮುಖ ಸ್ಮಾರಕಗಳನ್ನು ದೀಪಾಲಂಕೃತ ಮಾಡುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ. ವಿಶೇಷವಾಗಿ, ಅಂಬಾವಿಲಾಸ ಅರಮನೆ ಸುತ್ತಲಿನ ಪ್ರದೇಶ, ಚಾಮುಂಡಿ ಬೆಟ್ಟ, ದೊಡ್ಡಕೆರೆ ಮೈದಾನ ಮತ್ತು ಕೆ.ಆರ್. ವೃತ್ತದಂತೆ ಹಲವು ಪ್ರಮುಖ  ಸ್ಥಳಗಳಲ್ಲಿ ದೀಪಾಲಂಕಾರವನ್ನು ಸ್ಮರಣೀಯವಾಗಿಸಲು ಅವಿರತ ಶ್ರಮಿಸಲಾಗುತ್ತಿದೆ.

ಪ್ರತಿ ವರ್ಷದ ದಸರಾ ಮಹೋತ್ಸವದಲ್ಲೂ ದೀಪಾಲಂಕಾರದ ವ್ಯವಸ್ಥೆ ಮಾಡಲಾಗುತ್ತದೆ. ಹಾಗಾಗಿ ಇದನ್ನು ಏಕತಾನತೆಯಿಂದ ಹೊರ ತರುವ ಸವಾಲು ಇಲಾಖೆ ಮೇಲಿದೆ. ನೂತನ ತಂತ್ರಜ್ಞಾನಗಳ ನೆರವಿನಿಂದ ಹೊಸತನ ಪರಿಚಯಿಸುವ ಉದ್ದೇಶ ಹೊಂದಲಾಗಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಸೆಸ್ಕಾಂ ಅಧ್ಯಕ್ಷ ಎ.ಬಿ.ರಮೇಶ್‌ ಬಂಡಿಸಿದ್ದೇಗೌಡ, ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ ಹಾಗೂ ಅಧಿಕಾರಿ ವರ್ಗ ಕಾರ್ಯೋನ್ಮುಕವಾಗಿದೆ. ಮುಂಬೈ, ಪಶ್ವಿಮ ಬಂಗಲಾಕ್ಕೆ ತೆರಳಿ ಅಲ್ಲಿನ  ಪ್ರಮುಖ ಹಬ್ಬಗಳ ಆಚರಣೆ ವೇಳೆಯಲ್ಲಿನ ದೀಪಾಲಂಕಾರ ವ್ಯವಸ್ಥೆ ಬಗೆಗೂ ಮಾಹಿತಿ ಸಂಗ್ರಹಿಸಲಾಗಿದೆ. ಜತೆಗೆ ಚೀನಾದಲ್ಲಿನ ತಾಂತ್ರಿಕ ಅಭಿವೃದ್ಧಿ ಬಗೆಗೂ ಹೆಚ್ಚಿನ ಅಧ್ಯಯನ ನಡೆಸಿ ಅವುಗಳನ್ನು ದಸರಾ ದೀಪಾಲಂಕಾರದಲ್ಲಿ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ.

ಸೆಸ್ಕಾಂ ಅಧಿಕಾರಿ ಮತ್ತು  ಸಿಬ್ಬಂದಿ ವರ್ಗ ದಸರಾ ದೀಪಾಲಂಕಾರಕ್ಕಾಗಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ದಿನನಿತ್ಯದ ಕೆಲಸಗಳ ಜತೆಗೆ ದಸರಾ ದೀಪಾಲಂಕಾರಕ್ಕೂ ಹೆಚ್ಚುವರಿ ಸಮಯ ವ್ಯಯಿಸುತ್ತಿದ್ದು, ಪರಿಣಾಮ ತಡರಾತ್ರಿ ವರೆಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಡ್ರೋನ್‌ ಶೂಟ್‌:

ಮೈಸೂರಿನ ದಸರಾ ದೀಪಾಲಂಕಾರ ಸೆಸ್ಕಾಂನ ಪ್ರಮುಖ ಯೋಜನೆಯಾಗಿ ಪ್ರಸಿದ್ಧವಾಗಿದೆ, ಇದು ಪ್ರವಾಸಿಗರ ಗಮನವನ್ನು ಸೆಳೆಯುತ್ತದೆ ಮತ್ತು ನಗರವನ್ನು ಸುಂದರ ಹಾಗೂ ಆಕರ್ಷಕವಾಗಿ ತೋರಿಸುತ್ತದೆ. ಈ ಸೌಂಧರ್ಯವನ್ನು ಡಿಜಿಟಲ್‌ ರೂಪದಲ್ಲಿ ದಾಖಲಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಒಮ್ಮೆಲೆ ಒಂದು ಸಾವಿರ ಡ್ರೋನ್‌  ಗಳನ್ನು ಬಳಸಿ ೧೩೫ ಕಿ.ಮೀ ಉದ್ದದ ದೀಪಾಲಂಕಾರದ ದೃಶ್ಯ ವೈಭವನ್ನು ಸೆರೆ ಹಿಡಿಯಲು ಚಿಂತಿಸಲಾಗುತ್ತಿದೆ. ಆದರೆ ಸದ್ಯಕ್ಕೆ ಇದಕ್ಕಾಗಿ ಯಾವುದೇ ಹಣ ಮೀಸಲಿಟ್ಟಿಲ್ಲ. ಹಾಗಾಗಿ ಪ್ರಾಯೋಜಕರ ಸಹಾಯದಿಂದ ಈ ಯೋಜನೆ ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ.

key words: DASARA LIGHTINGS, capture, beauty of lightings, SESCOM, “DRONE” technology

SUMMARY:

Lightings is a key highlight of the renowned Mysore Dussehra festival, featuring a special lighting design in a "warm white" concept that complements the illumination of the  Ambavilas Palace.

Tags :

.