For the best experience, open
https://m.justkannada.in
on your mobile browser.

ದಸರಾ ಚಲನಚಿತ್ರೋತ್ಸವ 2024: ಕಿರುಚಿತ್ರಗಳ ಆಹ್ವಾನ: ಷರತ್ತುಗಳು ಹೀಗಿದೆ

04:49 PM Aug 24, 2024 IST | prashanth
ದಸರಾ ಚಲನಚಿತ್ರೋತ್ಸವ 2024   ಕಿರುಚಿತ್ರಗಳ ಆಹ್ವಾನ  ಷರತ್ತುಗಳು ಹೀಗಿದೆ

ಮೈಸೂರು ಆಗಸ್ಟ್,24,2024 (www.justkannada.in): ಮೈಸೂರು ದಸರಾ ಮಹೋತ್ಸವ-2024ರ ಅಂಗವಾಗಿ ದಸರಾ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ಕಿರುಚಿತ್ರಗಳ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ “ಕಿರುಚಿತ್ರ ಸ್ಪರ್ಧೆ”ಯನ್ನು ಏರ್ಪಡಿಸಲಾಗಿದೆ.

ಕಿರುಚಿತ್ರವು 10 ರಿಂದ 15 ನಿಮಿಷಗಳ ಅವಧಿಗೆ ಸೀಮಿತವಾಗಿ ನಿರ್ಮಿಸಿರುವ ಕಿರುಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಅತ್ಯತ್ತಮ 3 ಕಿರುಚಿತ್ರಗಳಿಗೆ ಪ್ರಮಾಣಪತ್ರ ಹಾಗೂ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಿ ಗೌರವ ಸಲ್ಲಿಸಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಲು ದಿನಾಂಕ: 12-09-2024ರಂದು  ಕೊನೆಯ ದಿನವಾಗಿದ್ದು  ಹೆಚ್ಚಿನ ಮಾಹಿತಿಗಾಗಿ  ಶ್ರೇಯಸ್.  ದೂರವಾಣಿ ಸಂಖ್ಯೆ  7892543852 ಸಂಪರ್ಕಿಸುವಂತೆ ದಸರಾ ಚಲನಚಿತ್ರೋತ್ಸವ  -2024 ಉಪ ಸಮಿತಿಯ ಕಾರ್ಯದರ್ಶಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಿರುಚಿತ್ರದ ಅವಧಿಯು 10 ರಿಂದ 15 ನಿಮಿಷ ಮೀರಬಾರದು. (ಶಿರ್ಷಿಕೆ ಒಳಗೊಂಡಂತೆ)

ಕಿರುಚಿತ್ರವು ಯಾವುದೇ ಆನ್ ಲೈ‌ನ್ ಮೀಡಿಯಾದಲ್ಲಿ ಬಿಡುಗೆಡೆಯಾಗಿರಬಾರದು. (ಉದಾ: ಯೂಟ್ಯೂಬ್, ಫೇಸ್‌ಬುಕ್, ಇನ್ ಸ್ಟಾಗ್ರಾಮ್ ಇತರೆ)

ಕಿರುಚಿತ್ರವು  01-11-2023 ರಿಂದ 12-09-2024ರ ಅವಧಿಯೊಳಗೆ ನಿರ್ಮಾಣವಾಗಿರಬೇಕು.

ಕಿರುಚಿತ್ರವನ್ನು ಗೂಗಲ್ ಡ್ರೈವ್‌ನಲ್ಲಿ ಅಪ್ಲೋಡ್ ಮಾಡಿ, ಆ ಲಿಂಕ್ ಅನ್ನು ಅರ್ಜಿಯಲ್ಲಿ ನಮೂದಿಸಬೇಕು

ಅರ್ಜಿಗಾಗಿ ಈ ಲಿಂಕ್ ಬಳಸಿ (https://forms.gle/oNRmqv6v3AvQNedUA)

ತೀರ್ಪುಗಾರರ ತೀರ್ಮಾನವೇ ಅಂತಿಮ.

ಯಾವುದೇ ಭಾಷೆಯ ಕಿರುಚಿತ್ರವನ್ನು ಸ್ಪರ್ಧೆಗೆ ಸಲ್ಲಿಸಬಹುದು.

ಸ್ಪರ್ಧೆಗೆ ಭಾಗವಹಿಸುವ ಎಲ್ಲಾ ಕಿರುಚಿತ್ರಗಳಿಗೆ ಪ್ರಮಾಣ ಪತ್ರ ನೀಡಲಾಗುತ್ತದೆ.

ಆಯ್ಕೆಯಾಗುವ ವಿಜೇತ ಹಾಗೂ ಅತ್ಯುತ್ತಮ ಕಿರುಚಿತ್ರಗಳನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುವುದು.

ಆಯ್ಕೆಯಾಗುವ ಕಿರುಚಿತ್ರವನ್ನು ಮಾತ್ರ ಡಿ.ಸಿ.ಪಿ ಫಾರ್‌ ಮೆಟ್‌ನಲ್ಲಿ ನೀಡಬೇಕಾಗುತ್ತದೆ.

ಕಿರುಚಿತ್ರಗಳಿಗೆ ಉಪಶೀರ್ಷಿಕೆಗಳು ಕಡ್ಡಾಯ.

ಕಿರುಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಹಾಗೂ ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಲಾಗುತ್ತದೆ.

ಈ ಮೇಲಿನ ಷರತ್ತುಗಳಂತೆ ಸಲ್ಲಿಕೆಯಾಗದೇ ಇರುವ ಕಿರುಚಿತ್ರಗಳನ್ನು ಸ್ಪರ್ಧೆಗೆ ಪರಿಗಣಿಸದೇ ತಿರಸ್ಕರಿಸುವ ಅಧಿಕಾರ ಸಮಿತಿಗೆ ಇರುತ್ತದೆ.

Key words: dasara Film Festival 2024, Short Films, Competition

Tags :

.