HomeBreaking NewsLatest NewsPoliticsSportsCrimeCinema

ಶೆಟ್ಟರ್ ಗೆ ಬಿಜೆಪಿ ಗಾಳ: ಎರಡೂ ಪಕ್ಷದಲ್ಲಿ ನಾಯಕತ್ವದ ಕೊರತೆ ಎಂದು ಟೀಕಿಸಿದ ಡಿ.ಕೆ ಶಿವಕುಮಾರ್.

02:51 PM Jan 24, 2024 IST | prashanth

ಮೈಸೂರು,ಜನವರಿ,24,2024(www.justkannada.in): ಕಾಂಗ್ರೆಸ್ ಬಂದಿರುವ ಜಗದೀಶ್ ಶೆಟ್ಟರ್ ಅವರನ್ನ ವಾಪಸ್ ಕರೆತರಲು ಬಿಜೆಪಿ ಸಂಪರ್ಕಿಸುತ್ತಿದ್ದಾರೆ ಅಂದ್ರೆ ಎರಡೂ ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ ಅಂತ ಅರ್ಥ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಟೀಕಿಸಿದರು.

ಮೈಸೂರಿನ ಬೈಲುಕುಪ್ಪೆಯಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್,  ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಗೆ ಬಂದಿದ್ದಾರೆ. ಅವರನ್ನೇ ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿಯವರು ಸಂಪರ್ಕಿಸುತ್ತಿದ್ದಾರೆ ಅಂದರೆ ಏನರ್ಥ ? ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ.  ಯಾಕೆ ನಿಮ್ಮಲ್ಲಿ ಲೀಡರ್‌ ಗಳು ಇಲ್ವ ? ಒಳ್ಳೆಯ ಕ್ಯಾಂಡಿಡೇಟ್‌ಗಳು ಇದ್ದರೆ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿಕೊಳ್ಳಿ ಎಂದು ಟಾಂಗ್ ನೀಡಿದರು.

ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಕಣ್ಣೀರು ಹಾಕಿಸಿದವರು ಯಾರು ? ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದಿದ್ದು ಯಾರು ? ಇದೆಲ್ಲವನ್ನೂ ರಾಜ್ಯ ರಾಜಕಾರಣ ನೋಡಿದೆ. ಈಗ ಅವರಿಬ್ಬರೂ ತಬ್ಬಿಕೊಳ್ಳುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರ ತೆಗೆದವರನ್ನೇ ತಬ್ಬಿಕೊಳ್ಳುತ್ತಿದ್ದಾರೆ. ಅಂದರೆ ಎರಡೂ ಪಕ್ಷದಲ್ಲಿ ನಾಯಕತ್ವದ ಕೊರತೆ ಇದೆ ಅಂತ ಅರ್ಥ ಎಂದು ಡಿಸಿಎಂ ಡಿಕೆ ಶಿವಕುಮಾರ್  ಲೇವಡಿ ಮಾಡಿದರು.

Key words: DCM-DK Shivakumar-criticizes -lack of leadership –BJP-JDS

Tags :
BJP-JDScriticizesDCMDK Shivakumarlack of leadership
Next Article