For the best experience, open
https://m.justkannada.in
on your mobile browser.

ನಾರಿ ಶಕ್ತಿ ಬಗ್ಗೆ ಬಹಳ ಗೌರವವಿದೆ ಎನ್ನುವ ಹೆಚ್.ಡಿಕೆ ಮೊದಲು ಆ ತಾಯಂದಿರಿಗೆ ಧೈರ್ಯ ಹೇಳಲಿ- ಡಿಸಿಎಂ ಡಿ.ಕೆ ಶಿವಕುಮಾರ್.

03:19 PM May 01, 2024 IST | prashanth
ನಾರಿ ಶಕ್ತಿ ಬಗ್ಗೆ ಬಹಳ ಗೌರವವಿದೆ ಎನ್ನುವ ಹೆಚ್ ಡಿಕೆ ಮೊದಲು ಆ ತಾಯಂದಿರಿಗೆ ಧೈರ್ಯ ಹೇಳಲಿ  ಡಿಸಿಎಂ ಡಿ ಕೆ ಶಿವಕುಮಾರ್

ಯಾದಗಿರಿ,ಮೇ,1,2024 (www.justkannada.in):  ಪ್ರಜ್ವಲ್ ರೇವಣ್ಣ ವಿರುದ್ಧ  ಲೈಂಗಿಕ ದೌರ್ಜನ್ಯ, ವಿಡಿಯೋ ಬಿಡುಗಡೆ ಪ್ರಕರಣ ಸಂಬಂಧ ಇದರ ಹಿಂದೆ ಮಹಾನಾಯಕನ ಕೈವಾಡ ಇದೆ ಎಂದಿದ್ದ ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಕುಮಾರಸ್ವಾಮಿಯವರು ನಾರಿ ಶಕ್ತಿ ಬಗ್ಗೆ ತಂದೆ ತಾಯಿ ಬಗ್ಗೆ ಬಹಳ ಗೌರವಿದೆ. ಹೆಣ್ಣುಮಕ್ಕಳಿಗೆ ಗೌರವ ಇದೆ ಅಂತ ಹೇಳುತ್ತಾರಲ್ಲ. ಹಾಗಾದರೆ ಮೊದಲು ಹೋಗಿ ಆ ತಾಯಂದಿರಿಗೆ ಧೈರ್ಯ ಹೇಳುವ ಹಾಗೂ ಸಾಂತ್ವನ ತುಂಬುವಂತ ಕೆಲಸವನ್ನು ಬಿಜೆಪಿಯವರು ಹಾಗೂ ಜನತಾದಳದವರು ಮಾಡಲಿ ಎಂದು ಟಾಂಗ್ ಕೊಟ್ಟಿದ್ದಾರೆ.

ದೇವರಾಜೇಗೌಡ ಯಾರ್ಯಾರನ್ನು ಭೇಟಿಯಾಗಿದ್ದಾರೆ ಎಂದು ಗೊತ್ತಿದೆ. ಮುಂಚಿತವಾಗಿಯೇ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು.ರಾಜಕೀಯ ಮಾಡೋದಾದರೆ ಏನು ಬೇಕಾದರೂ ಮಾಡುತ್ತಿದ್ದವು. ನಾನು ಏನು ಮಾಡಬೇಕು ಅನ್ನೋದು ನನಗೂ ಗೊತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

Key words DCM, DK Shivakumar, Former CM, HDK

Tags :

.