ಜಾತಿ ಜನಗಣತಿ ವರದಿ ಸ್ವೀಕಾರ ವಿರೋಧಿ ನಿಲುವಿಗೆ ಸಹಿ ಹಾಕಿದ್ದನ್ನ ಒಪ್ಪಿಕೊಂಡ ಡಿಸಿಎಂ ಡಿಕೆ ಶಿವಕುಮಾರ್
11:52 AM Nov 22, 2023 IST
|
prashanth
ನಿಗಮ ಮಂಡಳಿ ಅಧ್ಯಕ್ಷರು ಉಪಾಧ್ಯಕ್ಷರ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ನವೆಂಬರ್ 28 ರಂದು ಮತ್ತೆ ವೀಕ್ಷಕರು ಬರುತ್ತಾರೆ. ಇಲ್ಲಿ ಯಾರ ಬಣ ಅಂತೇನು ಇಲ್ಲ ಎಲ್ಲರೂ ಕಾಂಗ್ರೆಸ್ ನವರೇ ಸಚಿವ ಪರಮೇಶ್ವರ್ ಗೂ ಯಾವುದೇ ಅಸಮಾಧಾನವಿಲ್ಲ ಎಂದು ತಿಳಿಸಿದರು.
ಬೆಂಗಳೂರು,ನವೆಂಬರ್,22,2023(www.justkannada.in): ಜಾತಿ ಗಣತಿ ವರದಿ ಸ್ವೀಕಾರ ಮಾಡದಂತೆ ಸಹಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಯಾಕೆ ಸಹಿ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ.
ಜಾತಿ ಜನಗಣತಿ ವರದಿ ಸ್ವೀಕಾರ ವಿರೋಧಿ ನಿಲುವಿಗೆ ಸಹಿ ಹಾಕಿದ್ದನ್ನ ಒಪ್ಪಿಕೊಂಡ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಸಮುದಾಯದ ನಿರ್ಣಯ ಬೇರೆ. ರಾಜಕೀಯ ಬೇರೆ . ನಾನು ಸಭೆಗೆ ಹೋಗಿದ್ದೆ ಸಚಿವರು ಬಂದಿದ್ದರು. ವೈಜ್ಞಾನಿಕವಾಗಿ ವರದಿ ಆಗಬೇಕು ಎಂದಿದ್ದಾರೆ ತಪ್ಪೇನು ಎಂದು ಪ್ರಶ್ನಿಸಿದರು.
ನಿಗಮ ಮಂಡಳಿ ಅಧ್ಯಕ್ಷರು ಉಪಾಧ್ಯಕ್ಷರ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ನವೆಂಬರ್ 28 ರಂದು ಮತ್ತೆ ವೀಕ್ಷಕರು ಬರುತ್ತಾರೆ. ಇಲ್ಲಿ ಯಾರ ಬಣ ಅಂತೇನು ಇಲ್ಲ ಎಲ್ಲರೂ ಕಾಂಗ್ರೆಸ್ ನವರೇ ಸಚಿವ ಪರಮೇಶ್ವರ್ ಗೂ ಯಾವುದೇ ಅಸಮಾಧಾನವಿಲ್ಲ ಎಂದು ತಿಳಿಸಿದರು.
Key words: DCM -DK Shivakumar - signed - against - acceptance - caste -census report
Next Article