HomeBreaking NewsLatest NewsPoliticsSportsCrimeCinema

ನಾಗರಹೊಳೆ ಅರಣ್ಯದಲ್ಲಿ ಐದು ವರ್ಷದ ಗಂಡು ಹುಲಿ ಮೃತ ದೇಹ ಪತ್ತೆ.

06:11 PM Jun 12, 2024 IST | prashanth

ಮೈಸೂರು,ಜೂನ್,12,2024 (www.justkannada.in):  ನಾಗರಹೊಳೆ ಅರಣ್ಯದಲ್ಲಿ ಐದು ವರ್ಷದ ಗಂಡು ಹುಲಿ ಮೃತ ದೇಹ ಪತ್ತೆಯಾಗಿದೆ.

ನಾಗರಹೊಳೆ ಅರಣ್ಯ ಪ್ರದೇಶದ ಹುಣಸೂರು ವನ್ಯಜೀವಿ ವಲಯದ ವ್ಯಾಪ್ತಿಯ ಗೋವಿಂದೇಗೌಡ ಕಂಡಿ ಬಳಿ ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುವ ವೇಳೆ ಹುಲಿ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ಅರಣ್ಯಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು.

ಎರಡು ಹುಲಿಗಳ ನಡುವೆ ಕಾದಾಟ ನಡೆದು ಹುಲಿ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಹುಲಿಯ ಮೃತದೇಹವನ್ನ ಎನ್.ಟಿ.ಸಿ.ಎ ಮಾರ್ಗಸೂಚಿಯಂತೆ ಮರಣೋತ್ತರ ಪರೀಕ್ಷೆ ನಡೆಸಿ ಅರಣ್ಯ ಸಿಬ್ಬಂದಿ ಸುಟ್ಟುಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ .

Key words: dead body, tiger, Nagarahole forest

Tags :
dead body - five-year-old - tiger - Nagarahole forest.
Next Article