HomeBreaking NewsLatest NewsPoliticsSportsCrimeCinema

ಹೆಚ್.ಡಿಕೆಯನ್ನ ಸೋಲಿಸಿ ಮತ್ತೆ ಚನ್ನಪಟ್ಟಣಕ್ಕೆ ವಾಪಸ್ ಕಳುಹಿಸಿ- ಡಿಸಿಎಂ ಡಿ.ಕೆ ಶಿವಕುಮಾರ್ ಕರೆ

05:47 PM Apr 20, 2024 IST | prashanth

ಮೈಸೂರು, ಏಪ್ರಿಲ್,20,2024 (www.justkannada.in):   ಮಂಡ್ಯ ಲೋಕಸಭೆ ಮೈತ್ರಿ ಅಭ್ಯರ್ಥಿ ಹೆಚ್.ಡಿ ಕುಮಾರಸ್ವಾಮಿಯನ್ನ ಸೋಲಿಸಿ ಮತ್ತೆ ಚನ್ನಪಟ್ಟಣಕ್ಕೆ ವಾಪಸ್ ಕಳುಹಿಸಿ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕರೆ ನೀಡಿದರು.

ಇಂದು ಮೈಸೂರು ಜಿಲ್ಲೆಯ ಕೆಆರ್ ನಗರದಲ್ಲಿ ಮಾತನಾಡಿದ  ಡಿಸಿಎಂ ಡಿ.ಕೆ ಶಿವಕುಮಾರ್, 'ನಾವು ನಿನ್ನ ಬೆನ್ನಿಗೆ ಚೂರಿ ಹಾಕಿದ್ವಾ..? 'ನನ್ನ ಜಮೀನಲ್ಲಿ ಕಲ್ಲು ಒಡೆಯೋಕೆ ಇವನ ಅನುಮತಿ ಕೇಳಬೇಕಾ? ಎಂದು ಏಕವಚನದಲ್ಲೇ ಹೆಚ್.ಡಿಕೆ ವಿರುದ್ದ ವಾಗ್ದಾಳಿ ನಡೆಸಿದರು.

ಜೆಡಿಎಸ್ ಈಗ ಎ ಟೀಂ, ಬಿ ಟೀಂ ಅಲ್ಲ ಈಗ ಬಿಜೆಪಿ ಜೆಡಿಎಸ್ ಪಾರ್ಟ್​ನರ್ಸ್​ ಆಗಿದ್ದಾರೆ. ಮಂಡ್ಯದಲ್ಲಿ ಸ್ಟಾರ್ ಚಂದ್ರು ಅಲ್ಲ ಅಭ್ಯರ್ಥಿ, ಸಿದ್ದರಾಮಯ್ಯ, ಡಿಕೆ ಅಭ್ಯರ್ಥಿ. ಕಾಂಗ್ರೆಸ್​ ಪಕ್ಷ ಒಂದು ಜಾತಿ, ಧರ್ಮದ‌ ಮೇಲೆ ನಿಂತಿಲ್ಲ. ಮೋದಿ ಅವರು 15 ಲಕ್ಷ ಹಣ ಹಾಕ್ತೇವೆ ಅಂದಿದ್ದರು. ಯಾರಿಗಾದರೂ ಬಂತಾ?, ಆದಾಯ ಡಬಲ್‌ ಆಯ್ತಾ ಅಥವಾ ಯುವಕರಿಗೆ ಸರ್ಕಾರಿ ಕೆಲಸ ಸಿಕ್ತಾ?. ಮತ್ತೆ ಏಕೆ ಪ್ರಧಾನಿ ಮೋದಿಗೆ ವೋಟ್​ ಕೇಳುವುದಕ್ಕೆ ಬರುತ್ತಿದ್ದಾರೆ ಎಂದು ಪ್ರಶ್ನಿಸಿದರು.

ನಾವು ಭ್ರಷ್ಟಾಚಾರ ತೆಗೆಯಬೇಕು ಎಂದು ಗ್ಯಾರಂಟಿ ಯೋಜನೆ ಜಾರಿ ಮಾಡಿದರೆ, ಹೆಚ್​ಡಿಕೆ ಅವರು ಇದರಿಂದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನಲೆ ಹೆಚ್​ಡಿಕೆ ವಿರುದ್ಧ ಮಂಡ್ಯದ ಹೆಣ್ಣು ಮಕ್ಕಳು ರೊಚ್ಚಿಗೆದ್ದಿದ್ದಾರೆ.

ಸಾ.ರಾ.ಮಹೇಶ್, ಪುಟ್ಟರಾಜು, ತಮ್ಮಣ್ಣಗೆ ಚಾಕಲೇಟ್​ ಕೊಟ್ಟರು, ಜೆಡಿಎಸ್ ​ನಲ್ಲಿ ಯಾರು ಕಾರ್ಯಕರ್ತರು ಇಲ್ಲವೇ. ಡಿಕೆಶಿ ಒಕ್ಕಲಿಗ ಲೀಡರ್ ಅಲ್ಲ ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ. ಒಕ್ಕಲಿಗ ನಾಯಕ ಎಂದು ಹೇಳಿದ್ನಾ, ನಾನು ಸರ್ವಜನಾಂಗದ ನಾಯಕ  ಡಿಕೆ ಶಿವಕುಮಾರ್ ಹೇಳಿದರು.

Key words: Defeat, HDK, DCM, DK Shivakumar

Tags :
Defeat -HDK - back - Channapatnam - DCM -DK Shivakumar
Next Article