For the best experience, open
https://m.justkannada.in
on your mobile browser.

ಕೇಂದ್ರದ ಭರವಸೆ ಹುಸಿ: ರೈತರಿಂದ ದೆಹಲಿ ಚಲೋ, ಟ್ರ್ಯಾಕ್ಟರ್ ರ್ಯಾಲಿ- ಕುರುಬೂರು ಶಾಂತಕುಮಾರ್.

02:38 PM Feb 13, 2024 IST | prashanth
ಕೇಂದ್ರದ ಭರವಸೆ ಹುಸಿ  ರೈತರಿಂದ ದೆಹಲಿ ಚಲೋ  ಟ್ರ್ಯಾಕ್ಟರ್ ರ್ಯಾಲಿ  ಕುರುಬೂರು ಶಾಂತಕುಮಾರ್

ನವದೆಹಲಿ,ಫೆಬ್ರವರಿ,13,2024(www.justkannada.in): ಕಳೆದ ವರ್ಷ ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆ ಹುಸಿಯಾಗಿರುವ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯತರ), ಕೃಷಿ ಕಾರ್ಮಿಕರ ಸಂಘದ ವತಿಯಿಂದ  ರೈತರ ದೆಹಲಿ ಚಲೋ, ಟ್ರ್ಯಾಕ್ಟರ್ ರ್ಯಾಲಿ ನಡೆಸಲಾಗುತ್ತಿದೆ ಎಂದು ದಕ್ಷಿಣ ಭಾರತ ರಾಜ್ಯಗಳ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ಸಂಚಾಲಕರಾದ ಕುರುಬೂರು ಶಾಂತಕುಮಾರ್ ತಿಳಿಸಿದರು.

ಈ ಕುರಿತು ಮಾತನಾಡಿದ ಕುರುಬೂರು ಶಾಂತ ಕುಮಾರ್, ದೇಶದ ಎಲ್ಲ ರಾಜ್ಯಗಳ  200ಕ್ಕೂ ಹೆಚ್ಚು ರೈತ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೆತರ) ಚಳುವಳಿ ನಡೆಸಲಾಗುತ್ತಿದೆ. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ಡಾ.ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ದೇಶದ ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ವಿಶ್ವ ವ್ಯಾಪಾರ ಒಪ್ಪಂದದಿಂದ ಭಾರತ ಸರ್ಕಾರ ಹೊರಬರಬೇಕು. ದೇಶಾದ್ಯಂತ 60 ವರ್ಷ ತುಂಬಿದ ರೈತರಿಗೆ ಕನಿಷ್ಠ 10 ಸಾವಿರ ಪಿಂಚಣಿ ಯೋಜನೆ ಬರಬೇಕು ಎಂಬ ಒತ್ತಾಯಗಳ ಬಗ್ಗೆ ಕೇಂದ್ರ ಸರ್ಕಾರದ ನಿರ್ಧಾರ  ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಲ್ಲ ರಾಜ್ಯಗಳಿಂದ ಲಕ್ಷಾಂತರ ರೈತರು  ರ್ಯಾಲಿ ಮೂಲಕ ದೆಹಲಿ ಚಲೋ ಆಂದೋಲನಕ್ಕೆ ಆಗಮಿಸುತ್ತಿದ್ದಾರೆ ಎಂದರು.

ಎಸ್ ಕೆ ಎಂ (ರಾಜಕೀಯತರ) ಸಂಘಟನೆಯ ರೈತ ಮುಖಂಡರುಗಳಾದ ಪಂಜಾಬನ ಜಗಜಿತ್ ಸಿಂಗ್ ದಲೈವಾಲ್, ಮಧ್ಯಪ್ರದೇಶದ ಶಿವಕುಮಾರ್ ಕಕ್ಕ, ಹರಿಯಾಣದ ಅಭಿಮನ್ಯು ಕೊಹರ್ ಕರ್ನಾಟಕದ ಕುರುಬೂರ್ ಶಾಂತಕುಮಾರ್, ಕೇರಳ ರಾಜ್ಯದ ಕೆ.ವಿ ಬೀಜು ತಮಿಳುನಾಡಿನ ಪಾಂಡೆ ಬಿಹಾರದ ಅರುಣ್ ಸಿನ್ಹ, ಉತ್ತರ ಪ್ರದೇಶದ ಹರ್ಪಲ್ ಬಿಲಾರಿ, ಲಕ್ವೀನ್ದಂದರ್ ಸಿಂಗ್, ಜರ್ರನಲ್ ಸಿಂಗ್ , ಶಿರಸಾ ಸಿಂಗ್, ಇನ್ನು ಮುಂತಾದವರು ಈ ಸಂಘಟನೆಯ ಮುಖಂಡತ್ವ ವಹಿಸಿದ್ದಾರೆ.

Key words: Delhi Chalo – farmers- tractor -rally - Kuruburu ShanthaKumar.

Tags :

.