HomeBreaking NewsLatest NewsPoliticsSportsCrimeCinema

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಗೆ ಬಿಗ್ ರಿಲೀಫ್: ಷರತ್ತುಬದ್ಧ ಜಾಮೀನು ಮಂಜೂರು

11:10 AM Sep 13, 2024 IST | prashanth

ನವದೆಹಲಿ,ಸೆಪ್ಟಂಬರ್, 13,2024 (www.justkannada.in):  ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೇದ 6 ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ದ್ವಿಸದಸ್ಯ ಪೀಠವು ಅರವಿಂದ್ ಕೇಜ್ರಿವಾಲ್ ಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ಇದೀಗ 6 ತಿಂಗಳ ಬಳಿಕ ಅರವಿಂದ ಕೇಜ್ರಿವಾಲ್ ಗೆ ಬಿಡುಗಡೆ ಭಾಗ್ಯ  ಸಿಕ್ಕಿದೆ.

ಅರವಿಂದ ಕೇಜ್ರಿವಾಲ್ ಸಿಎಂ ಕಚೇರಿಗೆ ಪ್ರವೇಶಿಸುವಂತಿಲ್ಲ.  ಸರ್ಕಾರದ ಯಾವುದೇ ಕಡತಗಳಿಗೆ ಸಹಿ ಹಾಕುವಂತಿಲ್ಲ ಕೋರ್ಟ್ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು. ಕೇಜ್ರಿವಾಲ್ ಕೇಸ್ ಬಗ್ಗೆ ಪ್ರತಿಕ್ರಿಯಿಸುವಂತಿಲ್ಲ ಎಂದು  ಸುಪ್ರೀಂಕೋರ್ಟ್ ಷರತ್ತು ವಿಧಿಸಿದೆ. ಹಾಗೆಯೇ 10 ಲಕ್ಷ ಮೌಲ್ಯದ 2 ಬಾಂಡ್ ಸಲ್ಲಿಸುವಂತೆ ಸೂಚನೆ ನೀಡಿದೆ. ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಬಂಧನವಾಗಿತ್ತು.

Key words: Delhi CM, Arvind Kejriwal, Conditional bail, granted

Tags :
Arvind Kejriwalconditional bail.Delhi CMgranted
Next Article