For the best experience, open
https://m.justkannada.in
on your mobile browser.

ಮಾಜಿ ಸಚಿವ ಸಾ.ರಾ ಮಹೇಶ್ ಗೆ ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಆಗ್ರಹ.

05:10 PM Feb 17, 2024 IST | prashanth
ಮಾಜಿ ಸಚಿವ ಸಾ ರಾ ಮಹೇಶ್ ಗೆ ಮೈಸೂರು ಕೊಡುಗು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಆಗ್ರಹ

ಮೈಸೂರು,ಫೆಬ್ರವರಿ,17,2024(www.justkannada.in): ಮಾಜಿ ಸಚಿವ ಸಾ.ರಾ ಮಹೇಶ್ ಗೆ ಮೈಸೂರು-ಕೊಡುಗು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಜೆಡಿಎಸ್ ರಾಜ್ಯ ವಕ್ತಾರ ರವಿಚಂದ್ರೇಗೌಡ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ವಕ್ತಾರ ರವಿಚಂದ್ರೇಗೌಡ, ಮೈಸೂರು ಕೊಡುಗು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಾ. ರಾ ಮಹೇಶ್ ಅವರನ್ನು ಅಭ್ಯರ್ಥಿ ಮಾಡಬೇಕು.  ಸಾ.ರಾ ಮಹೇಶ್ ಅವರು ಮೈಸೂರು ಭಾಗದಲ್ಲಿ ಒಬ್ಬ ಪ್ರಭಾವಿ ನಾಯಕರು. ಮೂರು ಬಾರಿ ಸತತವಾಗಿ ಗೆದ್ದು ಜನರ ಜೊತೆ ಉತ್ತಮ ಸಂಪರ್ಕ ಹೊಂದಿರುವ ಪ್ರಭಾವಿ ರಾಜಕಾರಣಿ.

ಈ ಬಾರಿ ಅವರಿಗೆ ಟಿಕೆಟ್ ಕೊಟ್ಟರೆ ಗೆಲುವು ಖಚಿತ. ಹಾಗಾಗಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವಂತೆ ಜೆಡಿಎಸ್ ಪರವಾಗಿ ನಾವು ಒತ್ತಾಯ ಮಾಡುತ್ತೇವೆ ಎಂದು ರವಿಚಂದ್ರೇಗೌಡ ತಿಳಿಸಿದ್ದಾರೆ.

Key words: Demand - ticket - Mysore-Kodugu -Lok Sabha - former minister -Sa.Ra Mahesh.

Tags :

.