HomeBreaking NewsLatest NewsPoliticsSportsCrimeCinema

ರಾಜ್ಯಪಾಲರ ನೋಟಿಸ್ ಗೆ ಕಿಡಿ: ಸಂಪುಟ ಸಭೆಯ ನಿರ್ಣಯ ತಿಳಿಸಿದ ಡಿಕೆ ಶಿವಕುಮಾರ್

06:32 PM Aug 01, 2024 IST | prashanth

ಬೆಂಗಳೂರು,ಆಗಸ್ಟ್,1,2024 (www.justkannada.in):  ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿರುವ ಶೋಕಾಸ್ ನೋಟಿಸ್ ಸರಿಯಲ್ಲ. ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೋಟಿಸ್ ಬಗ್ಗೆ ಚರ್ಚೆಯಾಗಿದೆ.   ಪ್ರಜಾಪ್ರಭೂತ್ಬಕ್ಕೆ ಮಾರಕ ಆಗುವ ಪರಿಸ್ಥಿತಿ ರಾಜ್ಯದಲ್ಲಿ ಆಗಿದೆ.  ಜನಾಶೀರ್ವಾದದ ಸರ್ಕಾರ ತೆಗೆಸಲು ಹುನ್ನಾರ ನಡೆಸಲಾಗುತ್ತಿದೆ. ಇದು ಸಾಧ್ಯವಾಗಲ್ಲ. ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವದ ಕಗ್ಗೋಲೆಯಾಗುತ್ತಿದೆ.   ರಾಜ್ಯಪಾಲರಿಗೆ ಸಲಹೆ ನೀಡಲು, ಹಾಗೂ ಕೊಟ್ಟಿರುವ ನೋಟಿಸ್ ಹಿಂಪಡೆಯುವಂತೆ ಮನವಿಗೆ ಎಲ್ಲರೂ ಸೇರಿ ನಿರ್ಣಯ ಮಾಡಲಾಗಿದೆ ಎಂದರು.

ಬಹುಮತದಿಂದ ಆಯ್ಕೆಯಾದ ಸಿಎಂಗೆ ತೊಂದರೆ ನೀಡಲು ಯತ್ನಿಸಲಾಗುತ್ತಿದೆ. ಸಿದ್ದರಾಮಯ್ಯ ಸಿಎಂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.  ಅಬ್ರಾಹಂ ದೂರಿನ ಮೇರೆಗೆ ರಾಜ್ಯಪಾಲರು ನೋಟಿಸ್ ನೀಡಿದ್ದಾರೆ. ರಾಜ್ಯದ ಸಿಎಂಗೆ ಶೋಕಾಸ್ ನೋಟಿಸ್ ನಿಡ್ತಾರೆಂದರೇ ಇದು ಪ್ರಜಾಪ್ರಭುತ್ವದ ಕಗ್ಗೋಲೆ ಅಲ್ವಾ..? ಸಿಎಂ ಗೆ ತರಾತುರಿಯಲ್ಲಿ ನೋಟಿಸ್ ನೀಡುವ ಉದ್ದೇಶ ಏನಿತ್ತು? ತನಿಖೆಗೂ ಮುನ್ನವೇ ಗವರ್ನರ್ ನೊಟಿಸ್ ನೀಡಿದ್ದಾರೆ. ತನಿಖೆಗೂ ಮೊದಲೇ ಏಕೆ ಇಷ್ಟು ತರಾತುರಿ ಎಂದು ರಾಜ್ಯಪಾಲರ ನೋಟಿಸ್ ಬಗ್ಗೆ ಕಿಡಿಕಾರಿದರು.

Key words: demand, withdrawal, Governor, notice, DK Shivakumar

Tags :
DemandDK ShivakumarGovernornoticewithdrawal
Next Article