HomeBreaking NewsLatest NewsPoliticsSportsCrimeCinema

ಹಿಟ್ಲರ್, ಮುಸಲೋನಿ ತತ್ವದಲ್ಲಿ ನಂಬಿಕೆ ಇಟ್ಟಿರುವ ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ಅಪಾಯ-ಸಿಎಂ ಸಿದ್ದರಾಮಯ್ಯ.

05:59 PM Apr 08, 2024 IST | prashanth

ಬೆಂಗಳೂರು, ಏಪ್ರಿಲ್, 8, 2024 (www.justkannada.in): ಹಿಟ್ಲರ್, ಮುಸಲೋನಿ ತತ್ವದಲ್ಲಿ ನಂಬಿಕೆ ಇಟ್ಟಿರುವ ಬಿಜೆಪಿಯಿಂದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎಂದು ಸಿಎಂ ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಪ್ರಚಾರ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವಿಧಾನಸಭೆ ಚುನಾವಣೆಯಲ್ಲಿ ಸೌಮ್ಯರೆಡ್ಡಿ ಅವರಿಗೆ ಅನ್ಯಾವಾಗಿದೆ.   ಸಂಸದ ತೇಜಸ್ವಿ ಸೂರ್ಯ ಸೌಮ್ಯರೆಡ್ಡಿ  ಅವರನ್ನ ಮೋಸದಿಂದ ಸೋಲಿಸಿದರು.  ಈಗ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರನ್ನು ಗರಿಷ್ಠ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.

ಬಿಜೆಪಿಯವರು ಸಂವಿದಾನ  ಬದಲಾಯಿಸುತ್ತೇವೆ ಅಂತಿದ್ದಾರೆ. ಪ್ರಜಾಪ್ರಭುತ್ವ ಇಂದು ಅಪಾಯದಲ್ಲಿದೆ ಬಿಜೆಪಿಯವರು ಹಿಟ್ಲರ್  ಮುಸಲೋನಿ ತತ್ವದಲ್ಲಿ ನಂಬಿಕೆ ಇಟ್ಟುಕೊಂಡವರು. ಬಿಜೆಪಿ ಸಂಸದರಿಗೆ ಮೋದಿ ಅಂದರೇ ಭಯ. ಗಢಗಢ ನಡುಗುತ್ತಾರೆ. ಪುಕ್ಕಲರನ್ನ ಲೋಕಸಭೆಗೆ ಕಳುಹಿಸಬೇಕಾ..? ಎಂದು ಕಿಡಿಕಾರಿದರು.

Key words: Democracy, threatened, CM Siddaramaiah

Tags :
Democracy -threatened – BJP- CM Siddaramaiah
Next Article