For the best experience, open
https://m.justkannada.in
on your mobile browser.

ಡೆಂಘಿ ಪತ್ತೆ ಮತ್ತು ಚಿಕಿತ್ಸೆಯನ್ನು ಗಂಭೀರವಾಗಿ ಪರಿಗಣಿಸಿ: ಸಿ.ಎಂ ಸಿದ್ದರಾಮಯ್ಯ ಸೂಚನೆ

06:39 PM Jun 25, 2024 IST | prashanth
ಡೆಂಘಿ ಪತ್ತೆ ಮತ್ತು ಚಿಕಿತ್ಸೆಯನ್ನು ಗಂಭೀರವಾಗಿ ಪರಿಗಣಿಸಿ  ಸಿ ಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು,ಜೂನ್,25,2024 (www.justkannada.in):  ಡೆಂಘಿ ಪತ್ತೆ ಮತ್ತು ಚಿಕಿತ್ಸೆಯನ್ನು ಗಂಭೀರವಾಗಿ ಪರಿಗಣಿಸಿ ಎಂದು ಸಿ.ಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

ರಾಜ್ಯದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಸಿಎಂ  ಸಿದ್ದರಾಮಯ್ಯ ಚರ್ಚಿಸಿದರು. ಈ ವೇಳೆ ಅಗತ್ಯ ಚಿಕಿತ್ಸೆ, ಚುಚ್ವುಮದ್ದು, ಪ್ಲೇಟ್ ಲೆಟ್ಸ್ ಗಳ ಸಂಗ್ರಹಕ್ಕೆ ಸೂಚಿಸಿದರು.

ಸಭೆಯ ಮುಖ್ಯಾಂಶಗಳು ಹೀಗಿದೆ.

ರಾಜ್ಯದಲ್ಲಿ ನಿನ್ನೆಯ ವರೆಗೆ ಒಟ್ಟು 5374 ಪ್ರಕರಣ ವರದಿಯಾಗಿದ್ದು, 5 ಮರಣಗಳು ಸಂಭವಿಸಿವೆ

ಭಾರತ ಸರ್ಕಾರವು ಡೆಂಗಿ ಪ್ರಕರಣಗಳಲ್ಲಿ Case fatality rate ಅಂದರೆ ಮರಣ ಪ್ರಮಾಣ ಶೇ. 0.5 ನ್ನು ಮೀರುವಂತಿಲ್ಲ ಎಂದು ನಿಗದಿ ಪಡಿಸಿದೆ.

ರಾಜ್ಯದಲ್ಲಿ ಮರಣ ಪ್ರಮಾಣ ಇನ್ನೂ ಕಡಿಮೆ ಪ್ರಮಾಣದಲ್ಲಿದೆ. ಅಂದರೆ,  Case fatality rate 0.09% ಇದೆ

ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕಾಣಿಸಿಕೊಂಡಿವೆ

*ಬಿಬಿಎಂಪಿ ವ್ಯಾಪ್ತಿಯಲ್ಲಿ 1230 ಪ್ರಕರಣಗಳು ವರದಿಯಾಗಿವೆ.

ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ*

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯಗಳು, ಔಷಧಿಗಳು ಲಭ್ಯವಿರುವುದನ್ನುಖಾತರಿಪಡಿಸಲು ಸೂಚಿಸಲಾಗಿದೆ

ಆಶಾ ಕಾರ್ಯಕರ್ತೆಯರು, ನರ್ಸಿಂಗ್‌ ವಿದ್ಯಾರ್ಥಿಗಳು, ಎನ್.ಎಸ್.ಎಸ್. ವಿದ್ಯಾರ್ಥಿಗಳು ಮತ್ತಿತರ ಸ್ವಯಂ ಸೇವಕರ ನೆರವಿನೊಂದಿಗೆ ಮನೆ ಮನೆ ಸಮೀಕ್ಷೆ ನಡೆಸಿ ಅರಿವು ಮೂಡಿಸಲು ಸೂಚಿಸಲಾಗಿದೆ

ಪ್ರತಿ ಶುಕ್ರವಾರ source reduction activity (ರೋಗ ಹರಡುವ ಮೂಲ ಪತ್ತೆ ಮತ್ತು ನಾಶ) ವಿಶೇಷ ಅಭಿಯಾನ ಮಾಡಲಾಗುವುದು.

ಪ್ರತಿ ವಾರ ಬಿಬಿಎಂಪಿ, ನಗರಾಭಿವೃದ್ಧಿ ಮತ್ತು ಆರೋಗ್ಯ ಇಲಾಖೆಯವರು ಜಂಟಿಯಾಗಿ ಡೆಂಘಿ ನಿಯಂತ್ರಣ ಕುರಿತು ಪರಿಶೀಲನೆ ನಡೆಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ*

ಸ್ವಚ್ಛತೆ ಹಾಗೂ ನೀರು ನಿಲ್ಲದಂತೆ ನಗರ ಸ್ಥಳೀಯ ಸಂಸ್ಥೆಗಳು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ

*ಡೆಂಘಿ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕಾರ ನೀಡುವುದು ಅತಿ ಅಗತ್ಯ.

ಡೆಂಘಿ ಈಡಿಸ್‌ ಈಜಿಪ್ಟೈ ಎಂಬ ಸೊಳ್ಳೆಯಿಂದ ಹರಡುತ್ತದೆ. ಇದರ ಲಾರ್ವಾ ಮತ್ತು ಮೊಟ್ಟೆಗಳನ್ನು ಮೂಲದಲ್ಲಿಯೇ ನಾಶ ಮಾಡಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕವಾಗಿ ಅರಿವು ಮೂಡಿಸಲು ಸೂಚಿಸಲಾಗಿದೆ.

English summary

CM directs to take dengue detection and treatment seriously

CM Instructs officers to ensure availability of treatment, medicine and platelets

CM convened meeting with health minister and senior officers of the Government

Highlights of the meeting:

Total 5374 cases and 5 deaths have been reported in the State till yesterday.
Government of India guidelines states that dengue case fatality rate should not exceed 0.5 per cent. Case Fatality rate in the State is 0.09% which is far less than the prescribed limit.
More number of cases have been reported from Bengaluru, Chikkamagaluru, Mysore, Haveri, Shivamogga, Chitradurga, Dakshina Kannada districts.
1230 cases have been reported in BBMP limits.
Government has taken this very seriously and Chief Minister has directed the officers to take all measures to control the disease.
He directed officers to ensure availability of all necessary treatment facilities and medicines in all Government hospitals.
He told to conduct door to door survey and create awareness among the public and also to rope in ASHA workers, nursing students, NSS students and other volunteers for this purpose.
It was decided to hold a special mission to take up intense source reduction activity on every Friday.
He instructed BBMP, Urban Development Department and Health Department officers to jointly review dengue situation in the State
CM instructed that Urban local bodies should take necessary steps for sanitation and avoid accumulation of water.
He appealed to the public to co-operate with the authorities to control the disease by destroying the aedis egipti larvae at source.

Key words:  dengue- detection - treatment –seriously-CM Siddaramaiah -advises

Tags :

.