For the best experience, open
https://m.justkannada.in
on your mobile browser.

ಮಲೆ ಮಾದಪ್ಪನಿಗೆ 1.6 ಕೆಜಿ ತೂಕದ ಬೆಳ್ಳಿ ಆರತಿ ತಟ್ಟೆ ಕೊಡುಗೆ ನೀಡಿದ ಭಕ್ತೆ.

11:10 AM May 14, 2024 IST | prashanth
ಮಲೆ ಮಾದಪ್ಪನಿಗೆ 1 6 ಕೆಜಿ ತೂಕದ ಬೆಳ್ಳಿ ಆರತಿ ತಟ್ಟೆ ಕೊಡುಗೆ ನೀಡಿದ ಭಕ್ತೆ

ಚಾಮರಾಜನಗರ,ಮೇ,14,2024 (www.justkannada.in):  ಪ್ರಸಿದ್ಧ ಯಾತ್ರಾಸ್ಥಳ  ಮಲೇಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರು ತಮ್ಮ ಆಸೆ ಈಡೇರಿಕೆಗೆ ಹರಕೆ ಕಟ್ಟಿಕೊಳ್ಳುತ್ತಾರೆ ಅಂತೆಯೇ ಇಲ್ಲೊಬ್ಬರು ಭಕ್ತೆ ತಮ್ಮ ಬೇಡಿಕೆ ಈಡೇರಿದಕ್ಕೆ  ಮಲೆ ಮಾದಪ್ಪನಿಗೆ 1.6 ಕೆಜಿ ತೂಕದ ಬೆಳ್ಳಿ ಆರತಿ ತಟ್ಟೆ ಕೊಡುಗೆಯಾಗಿ ನೀಡಿದ್ದಾರೆ.

ಹೌದು ಬೆಂಗಳೂರು ನಿವಾಸಿ ನಾಗಮಣಿ ಎಂಬ ಭಕ್ತೆ  ಮಲೆ ಮಾದಪ್ಪನಿಗೆ 1.6 ಕೆ ಜಿ ತೂಕದ ಬೆಳ್ಳಿ ಆರತಿ ತಟ್ಟೆಯನ್ನ ಕೊಡುಗೆಯಾಗಿ ನೀಡಿದ್ದಾರೆ. ಮಲೇಮಹದೇವಶ್ವರ ಬೆಟ್ಟದದಲ್ಲಿ ತಮ್ಮ ಆಸೆ, ಆಕಾಂಕ್ಷೆ ಈಡೇರಿದ ಬಳಿಕ ಹರಕೆ, ಕಾಣಿಕೆ ಸಲ್ಲಿಸುವುದು ವಾಡಿಕೆಯಾಗಿದೆ.

ಅಂತೆಯೇ ನಾಗಮಣಿ   ಅವರು 1.6ಕೆಜಿ ಬೆಳ್ಳಿ ಆರತೆ ತಟ್ಟೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಮಾದಪ್ಪನಿಗೆ ನೀಡಿರುವ ಬೆಳ್ಳಿ ಆರತಿ ತಟ್ಟೆ ಬಲು ವಿಶೇಷವಾಗಿದೆ. ಮಾದಪ್ಪನ ವಾಹನವಾದ ಹುಲಿ, ಢಮರುಗ,  ತ್ರಿಶೂಲ, ನಂದಿ ಸೇರಿದಂತೆ ಎರಡೂ ಕೈತುಂಬಾ ಹಿಡಿದ ನಂದಾದೀಪ ಚಿತ್ತಾರ  ಒಳಗೊಂಡು ನೋಡಲು ಬೆಳ್ಳಿ ತಟ್ಟೆ ಅತ್ಯಾಕರ್ಷಕವಾಗಿದೆ.

Key words: devotee, silver plate, Male mahadeshwara hills

Tags :

.