For the best experience, open
https://m.justkannada.in
on your mobile browser.

ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

04:02 PM May 27, 2024 IST | mahesh
ನಿರ್ದೇಶಕ ಸೂರ್ಯ ಪ್ರಕಾಶ್ ನಿಧನ

ಚೆನ್ನೈ, ಮೇ.27,2024: (www.justkannada.in news) ಮಾಣಿಕ್ಕಂ', 'ಮಾಯಿ' ಮತ್ತು 'ದಿವಾನ್' ಚಿತ್ರಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಸೂರ್ಯ ಪ್ರಕಾಶ್ ಅವರು ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾದರು.

ವರದಿಗಳ ಪ್ರಕಾರ, ನಿರ್ದೇಶಕ ಸೂರ್ಯ ಪ್ರಕಾಶ್ ಇಂದು ಬೆಳಿಗ್ಗೆ ಹಠಾತ್ ಹೃದಯಾಘಾತದಿಂದ ನಿಧನರಾದರು. ಅವರ ನಿಧನಕ್ಕೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ.

ನಟ ಶರತ್‌ಕುಮಾರ್ ಟ್ವೀಟ್‌ ಮಾಡಿ, "ನನ್ನ ನಟನೆಯಲ್ಲಿ ಮಾಯಿ ಮತ್ತು ದಿವಾನ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ ನನ್ನ ಆತ್ಮೀಯ ಸ್ನೇಹಿತ ಸೂರ್ಯಪ್ರಕಾಶ್ ಅವರು ಇಂದು ಮುಂಜಾನೆ ಭಗವಂತನನ್ನು ಸೇರಿದ್ದಾರೆ ಎಂಬ ಸುದ್ದಿ ಆಘಾತಕಾರಿ ಮತ್ತು ನೋವಿನಿಂದ ಕೂಡಿದೆ. ನಿನ್ನೆಯೂ ಅವರೊಂದಿಗೆ ಮಾತನಾಡಿದ್ದೇನೆ. ಅಸ್ಥಿರ ಜೀವನದಲ್ಲಿ ಅವರ ಹಠಾತ್ ನಿಧನವು ನನ್ನ ಹೃದಯವನ್ನು ಭಾರವಾಗಿಸಿದೆ, ಅವರ ಅಗಲಿಕೆಯಿಂದ ದುಃಖಿತರಾಗಿರುವ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಮತ್ತೊಂದು ಟ್ವೀಟ್‌ ನಲ್ಲಿ ರಾಧಿಕಾ ಶರತ್‌ಕುಮಾರ್ ತಮ್ಮ ಸಂತಾಪ ಹಂಚಿಕೊಂಡಿದ್ದು,  "ಅದ್ಭುತ ಮತ್ತು ಪ್ರತಿಭಾವಂತ ವ್ಯಕ್ತಿ, ಉತ್ತಮ ಬರಹಗಾರ, ಹಾಸ್ಯದ ಅಭಿರುಚಿಯ ನಿರ್ದೇಶಕ, ಪದಗಳಿಗೆ ಮೀರಿ ಆಘಾತವಾಗಿದೆ ಎಂದಿದ್ದಾರೆ.

ನಿರ್ದೇಶಕ ಸೂರ್ಯಪ್ರಕಾಶ್ 1999 ರಲ್ಲಿ ನಟ ರಾಜ್ಕಿರಣ್ ಮತ್ತು ನಟಿ ವನಿತಾ ವಿಜಯಕುಮಾರ್ ಅಭಿನಯದ ಮಾಣಿಕಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರ ನಂತರ ಅವರು ಶರತ್ ಕುಮಾರ್ ಅವರ 'ಮಾಯಿ' ಮತ್ತು 'ದಿವಾನ್' ಅನ್ನು ನಿರ್ದೇಶಿಸಿದ್ದರು.

ಕೃಪೆ : ಟೈಮ್ಸ್ ಆಫ್ ಇಂಡಿಯಾ

key words: Tamil, Director, Surya Prakash, passes away

SUMMARY: 

Tamil director Surya Prakash, who has directed films 'Manikkam', 'Maayi' and 'Diwan' passed away this morning due to ill health. As per reports, director Surya Prakash died of a sudden heart attack this morning. The film industry is recording their condolences on his demise.

Actor Sarathkumar wrote in Tamil, which translates to, "The news that my dear friend Suryaprakash, who directed the hit films Mai and Diwan in my acting, has joined the Lord early this morning is shocking and painful. Having spoken to him even yesterday, his sudden demise in a volatile life has left me with a heavy heart. My deepest condolences to his family and friends who are grieving his loss. I pray to God to rest his soul in peace."

Tags :

.