ಮೈಸೂರಿನ ‘ಷೂ ವರ್ಲ್ಡ್' ನಲ್ಲಿ ಭಾರಿ ರಿಯಾಯಿತಿ ಮಾರಾಟ ಮೇಳ
ಮೈಸೂರ,ಏಪ್ರಿಲ್,19,2024 (www.justkannada.in): ಮೈಸೂರಿನ ರಾಮಸ್ವಾಮಿ ವೃತ್ತದ ಪ್ರೆಸ್ಟೀಜ್ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿರುವ ಹೆಸರಾಂತ ಪಾದರಕ್ಷೆಗಳ ಮಾರಾಟ ಸಂಸ್ಥೆಯಾದ “ಷೂ ವರ್ಲ್ಡ್” ಸಂಸ್ಥೆಯು ವಿಶೇಷ ರಿಯಾಯಿತಿ ಮಾರಾಟವನ್ನು ಆಯೋಜಿಸಿದೆ.
ಕಳೆದ 25 ವರ್ಷಗಳಿಂದ ಮೈಸೂರಿನ ಜನಮನದಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿರುವ “ಷೂ ವರ್ಲ್ಡ್” ಮೈಸೂರಿನ ಜನತೆಯ ಪಾದರಕ್ಷೆಗಳನ್ನು ಖರೀದಿಸುವ ಅತ್ಯುತ್ತಮ ತಾಣಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಹೊಂದಿದೆ. “ಷೂ ವರ್ಲ್ಡ್” ನಲ್ಲಿ ಸ್ತ್ರೀ ಮತ್ತು ಪುರುಷರ ಗುಣಮಟ್ಟದ, ಉತ್ತಮ ದರ್ಜೆಯ ಚಪ್ಪಲಿ, ಷೂ ಮತ್ತು ಇತರೆ ಎಲ್ಲಾ ಇನ್ ಹೌಸ್ ಬ್ರಾಂಡ್ ನ ಪಾದರಕ್ಷೆಗಳ ಖರೀದಿಯ ಮೇಲೆ 2 1ಆಫರ್ (2 ಖರೀದಿಸಿದಾಗ 1 ಉಚಿತ) ನೀಡಲಾಗುತ್ತಿದೆ.
ಇಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳ ಗುಣಮಟ್ಟದ ಪಾದರಕ್ಷೆಗಳನ್ನು ರಿಯಾಯಿತಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ರೂ.99/- ರಿಂದ ರೂ.9999/- ವರೆಗಿನ ಪ್ರಖ್ಯಾತ ಕಂಪನಿಗಳ ಪಾದರಕ್ಷೆಗಳುಇಲ್ಲಿ ಲಭ್ಯವಿದೆ.
“ಷೂ ವರ್ಲ್ಡ್'ನಲ್ಲಿ ಸ್ಥಳೀಯ, ಭಾರತೀಯ ಹಾಗೂ ಬಹುರಾಷ್ಟೀಯ (MNC) ಕಂಪನಿಗಳ ಷೂಗಳು ಲಭ್ಯವಿದೆ. ಸಂಸ್ಥೆಯು ಶಾಲೆ-ಕಾಲೇಜು, ಆಸ್ಪತ್ರೆ, ಸ್ವಚ್ಛತಾ ಕಾರ್ಮಿಕರಿಗೆ ಹಾಗೂ ಕೈಗಾರಿಕಾ ಸಂಸ್ಥೆಗಳಿಗೆ ಗುಣಮಟ್ಟದ ಫುಟ್ ವೇರ್ ಗಳನ್ನು ಸಗಟು ದರದಲ್ಲಿ ಒದಗಿಸುತ್ತಿದೆ. (Huge discount sale fair at 'Shoe World' in Mysuru)
ವೈದ್ಯರು ಸಲಹೆ ನೀಡುವ ಮೆಡಿಕಲ್ ಫುಟ್ ವೇರ್ಗಳು ಇಲ್ಲಿ ಲಭ್ಯವಿದೆ. MCP ಹಾಗೂ Medifeet-Ortho & Diabetes ಪಾದರಕ್ಷೆಗಳು ಲಭ್ಯವಿರುತ್ತದೆ. ಈ ಆಕರ್ಷಕ ರಿಯಾಯಿತಿ ಮಾರಾಟವು ದಿನಾಂಕ 21.04.2024 ರವರೆಗೆ ಚಾಲ್ತಿಯಲ್ಲಿರುತ್ತದೆ. ಗ್ರಾಹಕರು ಈ ರಿಯಾಯಿತಿ ಮಾರಾಟದ ಸದುಪಯೋಸಗಪಡಿಸಿಕೊಳ್ಳಬೇಕೆಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
Key words: discount , sale fair , Shoe World, Mysore