HomeBreaking NewsLatest NewsPoliticsSportsCrimeCinema

ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರದ ತಾರತಮ್ಯ ವಿಚಾರ: ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ಏನು..?

04:35 PM Feb 06, 2024 IST | prashanth

ಬೆಳಗಾವಿ,ಫೆಬ್ರವರಿ,6,2024(www.justkannada.in): ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ  ತಾರತಮ್ಯ ತೋರುತ್ತಿದೆ ಎಂದು ಆರೋಪಿಸಿ ನಾಳೆ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವ ಕುರಿತು ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಲಕ್ಷ್ಮಣ್ ಸವದಿ, ರಾಜ್ಯಕ್ಕೆ ಕೇಂದ್ರ ಸರ್ಕಾರ ನ್ಯಾಯ ಸಮ್ಮತ ಅನುದಾನ ನೀಡುತ್ತಿಲ್ಲ. ಸಂಕಷ್ಟದ  ಸಂದರ್ಭಧಲ್ಲಿ ರಾಜ್ಯಕ್ಕೆ ಬರಬೇಕಾಗಿರುವ ಅನುದಾನ ನೀಡಬೇಕು ಕರ್ನಾಟಕದಿಂದ ಎಷ್ಟು ಜಿಎಸ್ ಟಿ ಸಂಗ್ರಹವಾಗುತ್ತೆ ಎಂದು ಚರ್ಚಿಸಲಿ.  ರಾಜ್ಯದ ಸಂಸದರಿಗೆ ನಾನು ಪ್ರಶ್ನೆ ಮಾಡುತ್ತೇನೆ. ಗುಜರಾತ್ ನಿಂದ ಗೆದ್ದಿದ್ದೀರಾ.. ಇಲ್ಲ ಕರ್ನಾಟಕದಿಂದ ಗೆದ್ದಿದ್ದೀರಾ..?  ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಕಿಡಿಕಾರಿದರು.

ಡಿಕೆ ಶಿವಕುಮಾರ್ ಜೈಲಿಗೆ ಹೋಗಿದ್ದ ಬಗ್ಗೆ ಮಾತನಾಡುತ್ತಾರೆ ಹಾಗಾದರೇ ಬಿಎಸ್ ಯಡಿಯೂರಪ್ಪ ಸಹ ಜೈಲಿಗೆ ಹೋಗಿ ಬಂದಿಲ್ಲವಾ ಅಂತಾ ಕೇಳಬೇಕಾಗುತ್ತೆ ಎಂದು  ಶಾಸಕ ಲಕ್ಷ್ಮಣ್ ಸವದಿ ಟಾಂಗ್ ನೀಡಿದರು.

Key words: Discrimination - Center - allocation - grants – state- MLA -Lakshman Savadi

Tags :
Discrimination - Center - allocation - grants – state- MLA -Lakshman Savadi
Next Article