HomeBreaking NewsLatest NewsPoliticsSportsCrimeCinema

ಬ್ರಾಂಡ್ ಬೆಂಗಳೂರು ಬಗ್ಗೆ ಚರ್ಚೆ: ಡಬಲ್ ಡೆಕ್ಕರ್ ಮೆಟ್ರೋ, ಟನಲ್ ನಿರ್ಮಾಣ- ಡಿಸಿಎಂ ಡಿಕೆ ಶಿವಕುಮಾರ್

05:15 PM Jul 27, 2024 IST | prashanth

ಬೆಂಗಳೂರು,ಜುಲೈ,27,2024 (www.justkannada.in): ಬೆಂಗಳೂರಿನ ಎಸ್. ಟಿ ಮಾಲ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೂ ಟನಲ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಡಬಲ್ ಡೆಕ್ಕರ್ ಮೆಟ್ರೋ ಮಾಡಲು ನಿರ್ಧರಿಸಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬ್ರಾಂಡ್ ಬೆಂಗಳೂರು ನಿರ್ವಹಣೆ ಮತ್ತು ಕಾಮಗಾರಿ ಕುರಿತ ಸಭೆ ನಡೆಸಿ  ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬೆಂಗಳೂರು ಸಮಸ್ಯೆಗಳ ಬಗ್ಗೆ ಚರ್ಚಿಸಿದವು. ಶಾಸಕರ ಮೇಲೆ ಬೆಂಗಳೂರಿನ ಜವಾಬ್ದಾರಿ ಇದೆ. ಶಾಸಕರು ಪಕ್ಷ ಬೇಧ ಮರೆತು ಸಲಹೆ ನೀಡಿದರು.  ಗ್ರೇಟರ್ ಬೆಂಗಳೂರು ಬಗ್ಗೆ ಸಮಿತಿ ಮಾಡುತ್ತೇವೆ ಮೂರು ದಿನದಲ್ಲಿ ಸಮಿತಿ ರಚನೆ ಮಾಡಲಾಗುವುದು ಸದನ ಸಮಿತಿ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.

ಎಸ್. ಟಿ ಮಾಲ್ ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೂ ಟನಲ್ 18.6 ಕಿ.ಮೀ 'ಟನಲ್' ನಿರ್ಮಾಣ ಮಾಡುವ ಬಗ್ಗೆ ಚರ್ಚಿಸಲಾಗಿದೆ. ಇನ್ಮುಂದೆ ಬೆಂಗಳೂರಿನಲ್ಲಿ ಎಲ್ಲೂ ಜಾಗ ಸ್ವಾಧೀನ ಪಡಿಸಿಕೊಳ್ಳಲು ಆಗುವುದಿಲ್ಲ. ಬೆಂಗಳೂರಿನ ಕಸ ವಿಲೇವಾರಿಗೆ  ನಾಲ್ಕು ಕಡೆ 100 ಎಕರೆ ಜಾಗ ನೋಡುವುದು ಅಥವಾ ಖರೀದಿಸಿ ಕಸ ಬರ್ನ್ ಮಾಡುವ ಬಗ್ಗೆ ಚರ್ಚೆಯಾಗಿದೆ. ಟ್ರಾಫಿಕ್ ನಿಯಂತ್ರಣ ಸಂಬಂಧ ಪೊಲೀಸರಿಗೆ ಜವಾಬ್ದಾರಿ ನೀಡಲಾಗಿದೆ. ಟ್ರಾಫಿಕ್ ನಿಯಂತ್ರಣ ಸಂಬಂಧ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಸಭೆಯಲ್ಲಿ ಬಿಬಿಎಂಪಿ ಅಧಿಕಾರಿಗಳು, ಬೆಂಗಳೂರಿನ ಶಾಸಕರು ಪಾಲ್ಗೊಂಡಿದ್ದರು.

Key words: Discussion, Brand Bangalore, DCM, DK Shivakumar

Tags :
Brand BangaloreDCMdiscussionDK Shivakumar
Next Article