HomeBreaking NewsLatest NewsPoliticsSportsCrimeCinema

ಮಗು ವಿಚಾರಕ್ಕೆ ಡೈವೋರ್ಸ್ ಅನ್ನುವುದೆಲ್ಲಾ ಸುಳ್ಳು: ವದಂತಿಗಳನ್ನ ಹಬ್ಬಿಸಬೇಡಿ- ಚಂದನ್ ಶೆಟ್ಟಿ.

04:43 PM Jun 10, 2024 IST | prashanth

ಬೆಂಗಳೂರು,ಜೂನ್,10,2024 (www.justkannada.in): ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಡೈವರ್ಸ್ ಪಡೆದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಹರಡಿದ್ದ ವದಂತಿಗಳಿಗೆ ರ್ಯಾಪರ್ ಚಂದನ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಇಂದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸುದ್ದಿಗೋಷ್ಠಿ ನಡೆಸಿ ಡೈವರ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಹಬ್ಬಿದ್ದ ವದಂತಿಗಳಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.  ಈ ವೇಳೆ ಮಾತನಾಡಿದ ಚಂದನ್ ಶೆಟ್ಟಿ, ನಾವು ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿದ್ದೇವೆ. ನಮ್ಮ ಆಲೋಚನೆಗಳು ಜೀವನ ಶೈಲಿ ಬೇರೆ ಬೇರೆ ಆಗಿದ್ದವು. ನಿತ್ಯ ಮನಸ್ತಾಪ ಬರುತ್ತಿತ್ತು. ಒಟ್ಟಿಗೆ ಇರುವುದು ಸರಿಯಲ್ಲ ಅನ್ನಿಸಿತು. ಹೀಗಾಗಿ ವಿಚ್ಚೇದನ ಪಡೆಯಲು  ನಿರ್ಧಾರ ಮಾಡಿದವು. ನಮ್ಮ  ಇನ್ ಸ್ಟಾಗ್ರಾಮ್ ನಲ್ಲಿ ಸ್ಪಷ್ಟನೆ ನೀಡಿದ್ದೇವೆ ಬೇಡದಿರುವ ವಿಚಾರಗಳನ್ನ ಸೃಷ್ಠಿ ಮಾಡಿ ಹರಿಬಿಡುತ್ತಿದ್ದಾರೆ ಎಂದರು.

ನನ್ನಿಂದ ನಿವೇದದಿತಾ ಯಾವುದೇ ಜೀವನಾಂಶ ಪಡೆದಿಲ್ಲ.  ಡೈವರ್ಸ್ ಬಗ್ಗೆ ಯಾವುದೇ ವದಂತಿ ಹಬ್ಬಿಸಬೇಡಿ.  ಮಗು ವಿಚಾರಕ್ಕೆ ಡಿವೋರ್ಸ್ ಆಗಿದೆ ಅನ್ನುವುದೆಲ್ಲಾ ಸುಳ್ಳು. ನಿವೇದಿತಾಗೆ 3ನೇ ವ್ಯಕ್ತಿ ಜೊತೆ ಸಂಬಂಧ ಕಲ್ಪಿಸಬೇಡಿ.  ಬೇಸ್ ಲೆಸ್ ಆಗಿ ಇಲ್ಲದಿರುವುದುನ್ನ ಹೇಳಿದರೇ ನೋವಾಗುತ್ತೆ ಎಂದು ಚಂದನ್ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಇಬ್ಬರು ಹೊಂದಾಣಿಕೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟವು. ಆದರೆ ಆಗಲಿಲ್ಲ. ಮದುವೆಯಾದಾಗಲು ಖುಷಿಯಿಂದ ಆದವು. ಈಗ ಬಿಟ್ಟು ಹೋಗುವಾಗಲು ಖುಷಿಯಿಂದ ಹೋಗುತ್ತಿದ್ದೇವೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.

Key words: Divorce, Don't, spread, rumours, Chandan Shetty

Tags :
Chandan ShettyDivorceDon'trumours.spread
Next Article