HomeBreaking NewsLatest NewsPoliticsSportsCrimeCinema

ಸರ್ಕಾರವನ್ನೇ ಡಿಕೆ ಶಿವಕುಮಾರ್ ಕೈಗೊಂಬೆ ಮಾಡಿಕೊಂಡಿದ್ದಾರೆ- ಮಾಜಿ ಸಚಿವ ಶ್ರೀರಾಮುಲು.

03:27 PM Nov 25, 2023 IST | prashanth

ಬಳ್ಳಾರಿ,ನವೆಂಬರ್,25,2023(www.justkannada.in): ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ಅನುಮತಿ ವಾಪಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಶ್ರೀರಾಮುಲು, 'ಸರ್ಕಾರವನ್ನೇ ಡಿ.ಕೆ ಶಿವಕುಮಾರ್ ಕೈಗೊಂಬೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ಸಿನಿಮಾ ರೀತಿಯಲ್ಲಿ ಸರ್ಕಾರವನ್ನು ಬುಗರಿಯಂತೆ ಆಡಿಸುತ್ತಿದ್ದಾರೆ. ಗೊಂಬೆ ಆಡುತ್ತೈತೆ ಎನ್ನುವ ಹಾಗೆ ಡಿಕೆಗಾಗಿ‌ ಹಾಡು ಬರೆಯಬೇಕು. ಸರ್ಕಾರ ಮತ್ತು ಕಾನೂನಿನ‌ ಮಧ್ಯೆ ಭಿನ್ನಾಭಿಪ್ರಾಯ ಪ್ರಾರಂಭವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್​ ಮುಂದೆ ಸರ್ಕಾರ ತಲೆಬಾಗುತ್ತಿದೆಯಾ?, ಅಥವಾ ಸರ್ಕಾರದ ಮುಂದೆ ಇವರು ತಲೆಬಾಗುತ್ತಿದ್ದಾರಾ ಗೊತ್ತಾಗುತ್ತಿಲ್ಲ ಎಂದು  ಹರಿಹಾಯ್ದರು.

a

ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿಗೆ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಚಿವ ಶ್ರೀರಾಮುಲು, 'ಬಿಜೆಪಿ ಪಾರ್ಟಿಯನ್ನು ಒಬ್ಬ ರಾಮುಲು ಮಾತ್ರ ಕಟ್ಟಿಲ್ಲ. ರಾಜ್ಯದಲ್ಲಿರುವ ಕೊಟ್ಯಾಂತರ ಕಾರ್ಯಕರ್ತರ ಶ್ರಮದಿಂದ ಇವತ್ತು ಇಷ್ಟು ದೊಡ್ಡ ಪಾರ್ಟಿ ಆಗಿ ಬೆಳೆದಿದೆ. ಇಂತಹ ಸಂಧರ್ಭದಲ್ಲಿ ಯಾರನ್ನೂ ಸೇರಬೇಡ ಎನ್ನಲು ನನಗೆ ಅಧಿಕಾರ ಇಲ್ಲ ಎಂದರು.

Key words: DK Shivakumar - government - puppet - former minister- Sriramulu.

Tags :
DK Shivakumar - government - puppet - former minister- Sriramulu.
Next Article