HomeBreaking NewsLatest NewsPoliticsSportsCrimeCinema

ಡಿಕೆಶಿ ವಿರುದ್ದದ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್: ವಿಚಾರಣೆ ಮುಂದೂಡಿಕೆ.

05:13 PM Apr 05, 2024 IST | prashanth

ಬೆಂಗಳೂರು,ಏಪ್ರಿಲ್,5,2024 (www.justkannada.in):  ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಹೈಕೋರ್ಟ್ ವಿಚಾರಣೆಯನ್ನು ಏಪ್ರಿಲ್ 18ಕ್ಕೆ ಮುಂದೂಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ  ತನಿಖೆಯನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವ ಕುರಿತು ಸಿಬಿಐ ಹಾಗೂ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನ ಇಂದು  ಹೈಕೋರ್ಟ್ ವಿಚಾರಣೆ ನಡೆಸಿತು. ಹೈಕೋರ್ಟ್ ನಲ್ಲಿ ನ್ಯಾ. ಸೋಮಶೇಖರ್ ನ್ಯಾ ಉಮೇಶ್ ಅಡಿಗ ಅವರಿದ್ದ ಪೀಠದಲ್ಲಿ ವಿಚಾರಣೆ ನಡೆಸುತ್ತಿದ್ದು, ಸಿಬಿಐ ಪರ ವಿಶೇಷ ಪ್ರಸನ್ನ ಕುಮಾರ್ ವಾದ ಮಂಡಿಸಿದರು. ತನಿಖೆಗೆ ಸಮ್ಮತಿ ಪಡೆದ ಸರ್ಕಾರದ ಕ್ರಮ ಕಾನೂನು ಬಾಹಿರವೆಂದು ವಾದ ಮಂಡಿಸಿದರು.

2020ರ ಅಕ್ಟೋಬರ್ ಮೂರರಿಂದಲೂ ಸಿಬಿಐ ತನಿಖೆ ಅರ್ಜಿ ವಿಚಾರಣೆ ನಡೆಯುತ್ತಿದೆ. ಈಗಲೂ ತನಿಖೆ ಪ್ರಗತಿಯಲ್ಲಿದೆ ಎಂದು ಸಿಬಿಐ ಪರ ವಕೀಲರ ವಾದವಾಗಿದೆ. ಕಾನೂನಿನಲ್ಲಿ ಅವಕಾಶವಿದೆಯೇ? ಸಿ ಆರ್ ಪಿಸಿ ಅಡಿ ತನಿಖೆಗೆ ಕಾಲಮಿತಿ ಇಲ್ಲವೇ ಎಂದು ಹೈಕೋರ್ಟ್ ಪ್ರಶ್ನಿಸಿತು. ಬಳಿಕ  ವಿಚಾರಣೆಯನ್ನ ಹೈಕೋರ್ಟ್ ಏಪ್ರಿಲ್ 18 ಕ್ಕೆ  ಮುಂದೂಡಿಕೆ ಮಾಡಿದೆ.

Key words: DK Shivakumar, high court, hearing.

Tags :
AdjournmentDK Shivakumar-case-high courthearing
Next Article