For the best experience, open
https://m.justkannada.in
on your mobile browser.

ಡಿಕೆ ಶಿವಕುಮಾರ್ ಗೆ ಕೇವಲ ಸಂಪನ್ಮೂಲದ ಬಗ್ಗೆ ಆಸಕ್ತಿ ಹೊರತು ಜಲದ ಬಗ್ಗೆ ಅಲ್ಲ- ಬಿವೈ ವಿಜಯೇಂದ್ರ ಟೀಕೆ

03:07 PM Aug 12, 2024 IST | prashanth
ಡಿಕೆ ಶಿವಕುಮಾರ್ ಗೆ ಕೇವಲ ಸಂಪನ್ಮೂಲದ ಬಗ್ಗೆ ಆಸಕ್ತಿ ಹೊರತು ಜಲದ ಬಗ್ಗೆ ಅಲ್ಲ  ಬಿವೈ ವಿಜಯೇಂದ್ರ ಟೀಕೆ

ಕೊಪ್ಪಳ,ಆಗಸ್ಟ್,12,2024 (www.justkannada.in): ಡಿಸಿಎಂ ಹಾಗೂ ಜಲಸಂಪನ್ಮೂಳ ಸಚಿವ ಡಿಕೆ ಶಿವಕುಮಾರ್ ಗೆ ಕೇವಲ ಸಂಪನ್ಮೂಲದ ಬಗ್ಗೆ ಆಸಕ್ತಿ ಇದೆ ಹೊರತು ಜಲದ ಬಗ್ಗೆ ಆಸಕ್ತಿ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕಿಸಿದರು.

ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿ ಇರೋ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚ ಹೋಗಿರುವ ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ, ತುಂಗಭದ್ರಾ ಡ್ಯಾಂ ರೈತರ ಜೀವನಾಡಿಯಾಗಿದೆ. ರಾಜ್ಯದ ರೈತರ ಪರವಾಗಿ ಸರ್ಕಾರ ನಿಲ್ಲಬೇಕು. ಡಿಕೆ ಶಿವಕುಮಾರ್ ಅಧಿಕಾರಿಗಳನ್ನ ಹೊಣೆ ಮಾಡಲ್ಲ ಅಂತಾರೆ. ರಾಜ್ಯ ಸರ್ಕಾರವೇ ಇದರ ಹೊಣೆ ಹೊರಬೇಕು. ಸರ್ಕಾರ ಚೀಫ್ ಇಂಜಿನಿಯರ್ ನೇಮಕ ಮಾಡಿಲ್ಲ. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.  ತಜ್ಞರು ನೀಡಿದ ಯೋಜನೆ ಅನುಷ್ಠಾನ ಮಾಡಿಲ್ಲ ಎಂದು ಕಿಡಿಕಾರಿದರು.

ರಾಜ್ಯ ಸರ್ಕಾರದ ಹೊಣೆಗೇಡಿತನದಿಂದ ಈ ಘಟನೆ ಸಂಭವಿಸಿದೆ. ಪ್ರತಿ ಹೆಕ್ಟರ್ ಗೆ ತಲಾ 50,000 ನೀಡಬೇಕು. ತುಂಗಭದ್ರ ಡ್ಯಾಮ್ ಕಲ್ಯಾಣ ಕರ್ನಾಟಕ ಭಾಗದ ಜೀವನಾಡಿಯಾಗಿದೆ. ಕಳೆದ ಬಾರಿ ಬರಗಾಲದಿಂದ ರೈತರು ಕಂಗಾಲಾಗಿದ್ದರು. ಈ ಬಾರಿ ಎರಡು ಬೆಳೆ ಬೆಳೆಯಬಹುದು ಅಂತ ರೈತರು ಸಂತಸದಿಂದ ಇದ್ದರು. ಈಗ ತುಂಗಭದ್ರಾ ಡ್ಯಾಂ ಗೇಟ್ ಕೊಚ್ಚಿಕೊಂಡು ಹೋಗಿದ್ದು, ಇದರಿಂದ ಈ ಭಾಗದ ರೈತರಿಗೆ ಆಘಾತ ಉಂಟಾಗಿದೆ ಎಂದು ಹೇಳಿದರು.

Key words: DK Shivakumar, interested, resources, BY Vijayendra

Tags :

.