For the best experience, open
https://m.justkannada.in
on your mobile browser.

ಲೋಕಸಭಾ ಚುನಾವಣೆ ಸೋಲಿನ ದುಃಖದಿಂದ ಇನ್ನೂ ಹೊರಬಂದಿಲ್ಲ- ಡಿಸಿಎಂ ಡಿಕೆ ಶಿವಕುಮಾರ್.

03:24 PM Jun 07, 2024 IST | prashanth
ಲೋಕಸಭಾ ಚುನಾವಣೆ ಸೋಲಿನ ದುಃಖದಿಂದ ಇನ್ನೂ ಹೊರಬಂದಿಲ್ಲ  ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜೂನ್,7,2024 (www.justkannada.in): ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ನನ್ನ ತಮ್ಮ ಡಿ.ಕೆ. ಸುರೇಶ್‌ ಸೋಲು ನನ್ನ ವೈಯಕ್ತಿಕ ಸೋಲು.  ಈ ಸೋಲಿನ ದುಃಖದಿಂದ ನಾನು ಇನ್ನೂ ಹೊರಬಂದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ʼಬೆಂಗಳೂರು ಗ್ರಾಮಾಂತರದ ಚುನಾವಣೆಯ ವಿಚಾರದಲ್ಲಿ ನಾನು ಓವರ್ ಕಾನ್ಫಿಡೆನ್ಸ್ ನಲ್ಲಿದೆ. ಆದರೆ ಅದು ಹುಸಿಯಾಗಿದೆ. ಈ ರೀತಿಯ ಸೋಲು ನಿರೀಕ್ಷಿಸಿರಲಿಲ್ಲʼ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಹಾಗೂ ಜೆಡಿಎಸ್‌ ನವರು ಒಳ್ಳೆಯ ತಂತ್ರಗಾರಿಕೆ ಮಾಡಿದರು. ಜೆಡಿಎಸ್‌ ಬದಲಾಗಿ ಬಿಜೆಪಿಯಿಂದ ಅಭ್ಯರ್ಥಿ ಕಣಕ್ಕಿಳಿಸಿದರು.  ನಮಗೆ ಮಾಗಡಿ ಮತ್ತು ರಾಮನಗರದಲ್ಲಿ ಒಳ್ಳೆಯ  ಲೀಡ್ ಸಿಕ್ಕಿತ್ತು. ಕನಕಪುರದಲ್ಲಿ 60,000 ಮತಗಳ ಲೀಡ್ ನೀರಿಕ್ಷಿಸಿದ್ದವು. ಆದರೆ, 20,000 ಮತಗಳ ಲೀಡ್ ಮಾತ್ರ ಬಂದಿದೆ. ಬಿಜೆಪಿ ಅಭ್ಯರ್ಥಿಗೆ ಬೆಂಗಳೂರು ದಕ್ಷಿಣ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಒಳ್ಳೆಯ ಮುನ್ನಡೆ ಸಿಕ್ಕಿದೆ. ಹೀಗಾಗಿ ಅವರು ಗೆದ್ದರುʼ ಎಂದರು.

ಲೋಕಸಭಾ ಚುನಾವಣೆಯ ಸೋಲಿನ ದುಃಖದಿಂದ ಇನ್ನೂ ಹೊರಬಂದಿಲ್ಲ. ನಾನು ಇನ್ನೂ ನಿದ್ದೆಯ ಮೂಡ್‌ನಲ್ಲೇ ಇದ್ದೇನೆʼ ಎಂದು ಡಿಕೆ ಶಿವಕುಮಾರ್ ಹೇಳಿದರು.

Key words: DK Suresh, depeat, DCM, DK Shivakumar

Tags :

.