ನಟ ದರ್ಶನ್ ಹಾಗೂ ಸಹಚರರ DNA ಪರೀಕ್ಷೆಗೆ ಮುಂದಾದ ಪೊಲೀಸರು..!
The police are conducting DNA tests on nine accused, including actor Darshan, to gather evidence that will play a key role in bringing the accused to justice. The accused were brought to Victoria Hospital today for this purpose, sources said
ಬೆಂಗಳೂರು, ಜೂ.19,2024: (www.justkannada.in news) ಚಿತ್ರ ನಟಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ಕೆಂಗಣ್ಣಿಗೆ ಗುರಿಯಾಗಿ ಹತ್ಯೆಗೀಡಾದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಪತ್ತೆಗೆ ಇದೀಗ ಪೊಲೀಸರು ಮತ್ತೊಮ್ಮೆ ತಂತ್ರಜ್ಞಾನದ ಮೊರೆ ಹೋಗಿದ್ದಾರೆ.
ಆರೋಪವೆಸಗಿದವರಿಗೆ ಶಿಕ್ಷೆ ಕೊಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಾಕ್ಷಿಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ಪೊಲೀಸರು, ನಟ ದರ್ಶನ್ ಸೇರಿದಂತೆ 9 ಮಂದಿ ಆರೋಪಿಗಳ ಡಿಎನ್ಎ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಸಲುವಾಗಿ ಇಂದು ಆರೋಪಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಘಟನ ಸ್ಥಳದಲ್ಲಿ ದೊರತೆ ರಕ್ತದ ಕಲೆಗಳು, ಕೊದಲು ಹಾಗೂ ಇತರೆ ಜೈವಿಕ ಸಾಕ್ಷ್ಯಗಳ ಪತ್ತೆ ಹಾಗೂ ಹೊಂದಾಣಿಕೆಗೆ ಈ ಪರೀಕ್ಷೆ ನೆರವಾಗಲಿದೆ. ಡಿಎನ್ ಎ ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಕೃತ್ಯದಲ್ಲಿ ಭಾಗವಹಿಸಿದ್ದವರ ಬಂಡವಾಳ ಬಯಲಿಗೆ ಬರಲಿದೆ.
DNA ಪರೀಕ್ಷೆಯ ಪ್ರಯೋಜನ, ಬಳಸುವ ಕಾರಣಗಳನ್ನು ಗಮನಿಸೋಣ:
- *ಸಾಮಾನ್ಯವಾಗಿ DNA ಪರೀಕ್ಷೆಯನ್ನು ಸುಳಿವು ಪಡೆಯಲು ಮತ್ತು ಸತ್ಯಾಸತ್ಯತೆ ನಿರ್ಧರಿಸಲು ಬಳಸಲಾಗುತ್ತದೆ.* ಇದರ ಮೂಲಕ, ಅಪರಾಧದ ಸ್ಥಳದಲ್ಲಿ ಸಿಕ್ಕಿರುವ ಯಾವುದೇ ಜೈವಿಕ ಸಾಕ್ಷ್ಯಗಳ (ಮೂಳೆ, ಕೂದಲು, ರಕ್ತದ ಕಲೆಗಳು) ಪರಿಹಾರವನ್ನು ಹುಡುಕಬಹುದು.
- *ನ್ಯಾಯಾಂಗದ ದೃಷ್ಟಿಯಿಂದ DNA ಪರೀಕ್ಷೆ ಅತ್ಯಂತ ನಿಖರವಾದ ತಂತ್ರಜ್ಞಾನವಾಗಿದೆ.* ಇದು ಅಪರಾಧಿಯನ್ನು ಗುರುತಿಸಲು ಅಥವಾ ಆರೋಪಿಯನ್ನು ಕ್ಲೀನ್ ಚಿಟ್ ನೀಡಲು ನೆರವಾಗುತ್ತದೆ.
- *DNA ಪರೀಕ್ಷೆ ಶುದ್ಧ ವೈಜ್ಞಾನಿಕ ಪ್ರಕ್ರಿಯೆಯಾಗಿದೆ*, ಇದು ವ್ಯಕ್ತಿಗಳ ನಡುವೆ ಇರುವ ಅತ್ಯಂತ ಸಣ್ಣ ಭಿನ್ನತೆಗಳನ್ನು ಸಹ ಗುರುತಿಸಲು ಸಹಾಯಕವಾಗಿದೆ.
ಅದು ಯಾವ ಪರಿಸ್ಥಿತಿಯಲ್ಲಾದರೂ, DNA ಪರೀಕ್ಷೆಯ ಫಲಿತಾಂಶವು ನ್ಯಾಯದ ಮಾರ್ಗದರ್ಶಕವಗಿ ಕಾರ್ಯನಿರ್ವಹಿಸುತ್ತದೆ.
key words: Police to conduct, DNA test, of actor, Darshan ,and his associates
SUMMARY:
The police have once again resorted to technology to track down the accused in the Renukaswamy murder case, which was marred to death by sending obscene messages to a film actress.
The police are conducting DNA tests on nine accused, including actor Darshan, to gather evidence that will play a key role in bringing the accused to justice. The accused were brought to Victoria Hospital today for this purpose, sources said
The test will help in the detection and reconciliation of blood stains, incisions and other biological evidence at the scene of the incident. Based on the DNA test results, the capital of those involved in the act will be exposed.