For the best experience, open
https://m.justkannada.in
on your mobile browser.

ನರೇಂದ್ರ ಮೋದಿ ಅಂತಹ ಕೆಟ್ಟ ವ್ಯಕ್ತಿಗೆ ವೋಟ್ ಹಾಕಬೇಡಿ- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

05:31 PM May 01, 2024 IST | prashanth
ನರೇಂದ್ರ ಮೋದಿ ಅಂತಹ ಕೆಟ್ಟ ವ್ಯಕ್ತಿಗೆ ವೋಟ್ ಹಾಕಬೇಡಿ  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಯಾದಗಿರಿ,ಮೇ,1,2024 (www.justkannada.in):  ಲೋಕಸಭಾ ಚುನಾವಣಾ ಕಣ ರಂಗೇರಿದ್ದು ಮೇ 7 ರಂದು ರಾಜ್ಯದ ಉಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ. ಈ ನಡುವೆ  ನರೇಂದ್ರ ಮೋದಿ ಅಂತಹ ಕೆಟ್ಟ ವ್ಯಕ್ತಿಗೆ ವೋಟ್ ಹಾಕಬೇಡಿ ಎಂದು  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ಲಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬರಿ ನರೇಂದ್ರ ಮೋದಿಗೆ ಯಾಕೆ ಬೈತೀರಾ ಅಂತ ಕೆಲವರು ಹೇಳುತ್ತಾರೆ.  ಮೋದಿ ನನ್ನದೇ ಗ್ಯಾರಂಟಿ ಅಂತಾರೆ ಅದಕ್ಕೆ ಮೋದಿಗೆ ತಾನೇ ಹೇಳಬೇಕು. ಹಾಗಾಗಿ ನರೇಂದ್ರ ಮೋದಿ ಅಂತ ಕೆಟ್ಟ ವ್ಯಕ್ತಿಗೆ ವೋಟ್ ಹಾಕಬೇಡಿ ತಿಳಿಸಿದರು.

ನನ್ನದು 56 ಇಂಚಿನ ಎದೆ ಇದೆ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ. ನಿಜಾಮರ ಕಾಲದಲ್ಲೇ ಮಂಗಳಸೂತ್ರ ತೆಗೆದುಕೊಳ್ಳಲು ಆಗಿಲ್ಲ. ಪ್ರಧಾನಿ ಮೋದಿ ಕೇವಲ ಮುಸ್ಲಿಮರ ಬಗ್ಗೆ ಮಾತ್ರ ಮಾತನಾಡುತ್ತಾರೆ. ಗಾಂಧೀಜಿ ಡಾ. ಅಂಬೇಡ್ಕರ್ ನಿವಾಸದಲ್ಲಿ ಜಾಸ್ತಿ ಜನ ಮಕ್ಕಳಿದ್ದರು. ನಾವು ಅಧಿಕಾರದಲ್ಲಿದ್ದಾಗ ಮಂಗಳಸೂತ್ರ ಕಿತ್ತುಕೊಳ್ಳೋಕೆ ಬಂದ್ರ? 55 ವರ್ಷಗಳ ಕಾಲ ನಾವು ಅಧಿಕಾರದಲ್ಲಿದ್ದಾಗ ಯಾರಾದರೂ ಬಂದ್ರ? ಕಾಂಗ್ರೆಸ್ ಬಂದರೆ ಆಸ್ತಿ ಕಿತ್ತುಕೊಳ್ಳುತ್ತಾರೆ ಅಂತ ಮೋದಿ ಸುಳ್ಳು ಹೇಳುತ್ತಾರೆ. ನಾವು ಅಧಿಕಾರಕ್ಕೆ ಬಂದರೆ 5 ನ್ಯಾಯ 25 ಗ್ಯಾರಂಟಿಗಳನ್ನು ಕೊಡುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

Key words: don't, vote, Modi, Mallikarjuna Kharge

Tags :

.