For the best experience, open
https://m.justkannada.in
on your mobile browser.

ʼಹೃದಯʼವಂತ ವೈದ್ಯ ರಾಜಕೀಯಕ್ಕೆ ಬರೋದು ಸತ್ಯನಾ..?

02:36 PM Feb 05, 2024 IST | mahesh
ʼಹೃದಯʼವಂತ ವೈದ್ಯ ರಾಜಕೀಯಕ್ಕೆ ಬರೋದು ಸತ್ಯನಾ

ಬೆಂಗಳೂರು, ಫೆ.೦೫, ೨೦೨೪ : ಕೆಲ ದಿನಗಳ ಹಿಂದಷ್ಟೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್‌ ಸೇವೆಯಿಂದ ನಿವೃತ್ತಿ ಹೊಂದಿದರು. ನಿವೃತ್ತಿ ಬೆನ್ನಲ್ಲೇ, ಡಾ. ಮಂಜುನಾಥ್‌, ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಹರಡ ತೊಡಗಿತು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಅಳಿಯ ಆಗಿರುವ ಡಾ.ಮಂಜುನಾಥ್‌ ಅವರಿಗೆ ಈ ಕಾರಣಕ್ಕೆ ರಾಜಕೀಯ ನಂಟು. ಈ ಹಿನ್ನೆಲೆಯಲ್ಲೇ ಡಾ.ಮಂಜುನಾಥ್‌ ಅವರನ್ನು ರಾಜಕೀಯಕ್ಕೆ ಬರುತ್ತೀರಿ ಎಂಬ ಸುದ್ದಿಗೆ ರೆಕ್ಕೆ, ಪುಕ್ಕ ಸೇರಿರುವುದು.

ನಿವೃತ್ತಿ ಬಳಿಕದ ಜೀವನದ ಬಗ್ಗೆ ಡಾ.ಮಂಜುನಾಥ್‌ ಅವರನ್ನು ಪ್ರಶ್ನಿಸಿದರೆ, ವೈದ್ಯರಿಗೆ ನಿವೃತ್ತಿ ಎನ್ನುವುದಿಲ್ಲ. ಎರಡು ವಾರದಲ್ಲಿ ವೈದ್ಯಕೀಯ ಸೇವೆ ಪ್ರಾರಂಭಿಸುತ್ತೇನೆ. ಅಲ್ಲಿಯೂ ಮಧ್ಯಮ ವರ್ಗದ ರೋಗಿಗಳ ಜತೆಗೆ ಸಂಪರ್ಕದಲ್ಲಿರುತ್ತೇನೆ. ಚಿಕಿತ್ಸೆಗಳಿಗೆ ರಿಯಾಯಿತಿ ನೀಡುವ ವ್ಯವಸ್ಥೆ ಮಾಡುತ್ತೇನೆ ಎನ್ನುತ್ತಾರೆ.

ಡಾ.ಮಂಜುನಾಥ್.

ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಿ ಎಂಬ ಮಾತಿದೆಯಲ್ಲಾ ಎಂದು ಕೇಳಿದಾಗ,

ಸದ್ಯ ರಾಜಕೀಯಕ್ಕೆ ಬರುವ ಆಲೋಚನೆ ಇಲ್ಲ. ರಾಜಕೀಯ ಪ್ರವೇಶದ ಬಗ್ಗೆ ಹಿತೈಷಿಗಳು ವಿವಿಧ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿಮ್ಮ ಸೇವೆ ರಾಷ್ಟ್ರಕ್ಕೆ ಬೇಕು, ಹೀಗಾಗಿ ರಾಜಕೀಯಕ್ಕೆ ಬನ್ನಿ ಎಂದು ಹೇಳುತ್ತಿದ್ದಾರೆ. ನಾನು ಈ ಬಗ್ಗೆ ಗೊಂದಲದಲ್ಲಿ ಇದ್ದೇನೆ ಎನ್ನುತ್ತಾರೆ.

Key words : dr Manjunath ̲ jayadevea ̲ hospital ̲ bangalore ̲ politics ̲ entry

Tags :

.