HomeBreaking NewsLatest NewsPoliticsSportsCrimeCinema

ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದ ಕಾರಣ ಕಣ್ಣೀರು ಬರುತ್ತದೆ, ಆದರೂ ತಡೆದುಕೊಂಡಿದ್ದೇನೆ : ಡಾ.ಪುಷ್ಪಾ ಅಮರನಾಥ್

05:26 PM May 27, 2024 IST | mahesh

 

ಮೈಸೂರು, ಮೇ.27,2024: (www.justkannada.in news)  ಎಂಎಲ್ಸಿ ಚುನಾವಣೆ ಟಿಕೆಟ್ ಕೇಳಿದಾಗ ಕೊಡಲಿಲ್ಲ, ಬಳಿಕ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್‌ ಆಕಾಂಕ್ಷಿಯಾಗಿದ್ದೆ. ಆದರೆ ಆಗಲೂ ನಿರಾಸೆಯಾಯ್ತು.

ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪ ಅಮರನಾಥ್ ಮೈಸೂರಿನಲ್ಲಿ ಬೇಸರದ ಹೇಳಿಕೆ. ಮೈಸೂರಿನಲ್ಲಿ ಸೋಮವಾರ ಪತ್ರಕರ್ತರ ಜತೆ ಮಾತನಾಡಿದ ಅವರು ಹೇಳಿದಿಷ್ಟು..

ಈ ಹಿಂದೆಯೂ ಎಂಎಲ್ಸಿ ಚುನಾವಣೆ ಟಿಕೆಟ್ ಕೇಳಿದಾಗ ಕೊಡಲಿಲ್ಲ. ಆಗ ಡಾ ಡಿ‌ ತಿಮ್ಮಯ್ಯಗೆ ಟಿಕೆಟ್ ಕೊಟ್ಟರು. ಟಿಕೆಟ್ ಹಂಚಿಕೆ ಮಾಡುವಾಗ ನಾನು ಮಹಿಳೆ ಎಂಬುದನ್ನು ಪರಿಗಣಿಸಲಿಲ್ಲ. ನಾನು ದಲಿತ ಸಮುದಾಯದ ಬಲಗೈ ಪಂಗಡಕ್ಕೆ ಸೇರಿದವಳೆಂದು ಪರಿಗಣಿಸಿ ಎಡಗೈ ಪಂಗಡಕ್ಕೆ‌ ಟಿಕೆಟ್ ಕೊಟ್ಟರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಚಾಮರಾಜನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಸಚಿವ ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ಗೆ ಟಿಕೆಟ್ ಕೊಟ್ಟರು. ಟಿಕೆಟ್ ನೀಡುವಾಗಲೂ ಮಹಿಳೆ, ಜಾತಿ ಅಂತೆಲ್ಲಾ ಪರಿಗಣಿಸುವುದು ಬೇಸರ ಉಂಟುಮಾಡಿದೆ. ಟಿಕೆಟ್ ಸಿಗದಿರುವುದನ್ನು ನೆನೆಸಿಕೊಂಡರೆ ಕಣ್ಣೀರು ಬರುತ್ತೇ, ಆದರೂ ತಡೆದುಕೊಳ್ತೇನೆ.

ಮಹಿಳಾ ಮೀಸಲಾತಿ ಇಲ್ಲದಿದ್ದರೇ ಮಹಿಳೆಯರು ರಾಜಕೀಯಕ್ಕೆ ಬರಲು ಕೂಡ ಆಗುತ್ತಿರಲಿಲ್ಲ. ಮೀಸಲಾತಿ ಇರುವುದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ರಾಜಕಾರಣಕ್ಕೆ ಬರಲು ಸಾಧ್ಯವಾಗಿದೆ.

ಮುಂದಿನ ದಿನಗಳಲ್ಲಾದರೂ ಸೂಕ್ತ ಸ್ಥಾನಮಾನ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದೇನೆ. ಮೈಸೂರಿನಲ್ಲಿ ಕೆಪಿಸಿಸಿ ಮಹಿಳಾ‌ ಘಟಕ ಅಧ್ಯಕ್ಷೆ ಡಾ ಪುಷ್ಪ ಅಮರನಾಥ್ ಹೇಳಿಕೆ.

key words: Dr Pushpa Amarnath, I will be in tears, as I didn't get ticket, to contest elections, but I have endured it.

summary:

When I asked for an MLC election ticket, I was not given it, but later I wanted a ticket to contest the Lok Sabha elections. But i was still disappointed.

KPCC women's wing president Pushpa Amarnath made a sad statement in Mysuru. Speaking to reporters in Mysuru on Monday,

Tags :
as I didn't get ticketbut I have endured it.Dr Pushpa AmarnathI will be in tearsto contest elections
Next Article