For the best experience, open
https://m.justkannada.in
on your mobile browser.

 ಮೂಲ ಭಾಷೆ ʼಸನ್ನೆʼ  :  ಮೂಕನಾಗಬೇಕೋ ಜಗದೊಳು ಜ್ವಾಕಾಗಿರಬೇಕೋ..

07:16 PM May 27, 2024 IST | mahesh
 ಮೂಲ ಭಾಷೆ ʼಸನ್ನೆʼ     ಮೂಕನಾಗಬೇಕೋ ಜಗದೊಳು ಜ್ವಾಕಾಗಿರಬೇಕೋ

ಮೈಸೂರು, ಮೇ.27, 2024: (www.justkannada.in news)  ಆಯಿಷ್‌ ಸಂಸ್ಥೆ ಸನ್ನೆ ಭಾಷೆಯನ್ನು ತಿಳಿಸಿಕೊಡುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಸಂವಹನದ ಕಲೆ ವೃದ್ಧಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾರ್ಯೋನ್ಮುಕವಾಗಿದೆ ಎಂದು ಸಂಸ್ಥೆ ನಿರ್ದೇಶಕಿ ಡಾ.ಪುಷ್ಪಾವತಿ ಹೇಳಿದರು.

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಮತ್ತು ಭಾರತೀಯ ಸನ್ನೆ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರವು ‘ಮೂಲ ಭಾರತೀಯ ಸನ್ನೆ ಭಾಷೆ’ಯ ಕುರಿತು ಸೋಮವಾರದಿಂದ ಆಯೋಜಿಸಿರುವ ರಾಷ್ಟ್ರೀಯ ತರಬೇತಿ ಶಿಬಿರದಲ್ಲಿ ಮಾತನಾಡಿದರು.

ಎಲ್ಲರೂ ಒಂದೇ ರೀತಿಯಾಗಿ ಅರ್ಥೈಸಿಕೊಳ್ಳಬಹುದಾದ ಸನ್ನೆ ಭಾಷೆಯನ್ನು ಪ್ರಪಂಚದ ಭಾಷೆ ಎಂದು ಕರೆದರೂ ಅತಿಶಯೋಕ್ತಿಯಿಲ್ಲ.  ‘ಕಿವುಡು ಸಮಸ್ಯೆಯುಳ್ಳ ಸಾರಾ ಸನ್ನಿ ಅವರಿಗೆ ಸನ್ನೆ ಭಾಷೆಯ ಮೂಲಕ ವಾದ ನಡೆಸಲು ಅವಕಾಶ ದೊರತಿದ್ದು, ಆ ಮೂಲಕ ಸನ್ನೆ ಭಾಷೆಯ ಸೇವೆ ನ್ಯಾಯಾಂಗಕ್ಕೂ ವಿಸ್ತಾರಗೊಂಡಿದೆ ಎಂದು ಆಯಿಷ್‌ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ಅಭಿಪ್ರಾಯಪಟ್ಟರು.

ಮಾತು ದೇವರು ಕೊಟ್ಟ ವರ. ಆದರೆ ಕೆಲವೊಮ್ಮೆ ಅದೇ ತಪ್ಪಾಗಿ ಅರ್ಥೈಸಿ ಹೊಸ ಸಮಸ್ಯೆ ಉಂಟಾಗುವುದನ್ನು ಕಂಡಾಗ ಮಾತಿಲ್ಲದಿದ್ದರೆ ಚೆನ್ನಾಗಿತ್ತು ಎಂಬ ಭಾವನೆ ಬರುತ್ತದೆ. ಆದರೆ ಸನ್ನೆ ಭಾಷೆಯು ಇವೆಲ್ಲದರಿಂದಲೂ ಹೊರತಾಗಿದ್ದು, ಜಗತ್ತಿನಾದ್ಯಂತ ಯಾವುದೇ ತೊಂದರೆಯಿಲ್ಲದೆ ಬಳಸಬಹುದು ಎಂದರು.

ಸಂಕೇತ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರದ ಸಂಯೋಜಕ ಪ್ರೊ.ಅಜಿಶ್‌ ಕೆ. ಅಬ್ರಹಾಂ ಮಾತನಾಡಿ, ‘ದೇಶದಲ್ಲಿ ಒಟ್ಟು 800 ಕಿವುಡು ಮಕ್ಕಳ ಶಾಲೆಗಳಿವೆ. ಅಲ್ಲಿನ ಹಲವು ಶಿಕ್ಷಕರು ತರಬೇತಿಯ ಭಾಗವಾಗದೇ ಇರುವುದರಿಂದ ಅವರಿಗೆ ಸಂಕೇತ ಭಾಷೆ ತಿಳಿದಿಲ್ಲ. ಹೀಗಾಗಿ ಸಂವಹನವೂ ಸಾಧ್ಯವಾಗದೆ ಮಕ್ಕಳು ಮತ್ತು ಶಿಕ್ಷಕರ ನಡುವಿನ ಅಂತರ ಹೆಚ್ಚುತ್ತಿದೆ’ ಎಂದರು.

ಪತ್ರಕರ್ತೆ ರಶ್ಮಿ ಕೋಟಿ ಮಾತನಾಡಿ, ‘ಶ್ರವಣ ದೋಷ ಹುಟ್ಟಿನಿಂದಲೇ ಬರುತ್ತದೆ, ಅವನ್ನು ನಿವಾರಿಸುವುದು ಅಸಾಧ್ಯ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಈ ಹಿಂದೆ ಇತ್ತು. ಹೀಗಾಗಿ ಆ ಮಕ್ಕಳನ್ನು ಮೂಲೆಗುಂಪು ಮಾಡಲಾಗುತ್ತಿತ್ತು. ಆಯಿಷ್‌ನಂತಹ ಸಂಸ್ಥೆಗಳು ಮಾಡಿರುವ ಸಂಶೋಧನೆಯಿಂದಾಗಿ ಇಂದು ಅವರೂ ಎಲ್ಲರೊಡನೆ ಬೆರೆಯಲು ಸಾಧ್ಯವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸನ್ನೆ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರದ ಆರ್‌.ರಾಜ್‌ಕುಮಾರ್‌, ಡಾ.ರುಬೆನ್‌ ಟಿ.ವರ್ಗೀಸ್‌, ಸಚಿನ್‌ ಸಿಂಗ್‌, ಸ್ನೇಹಾ ತಿವಾರಿ, ರೂಬಿ ಭಾಗವಹಿಸಿದರು.

key words :  Dr. Pushpavathi, Director, AIISH, 'Basic Indian Sign Language'

SUMMARY: 

Dr. Pushpavathi, Director, AIISH Institute, said, "Apart from imparting sign language, AIISH has been working on several schemes to enhance the art of communication among students.

She was speaking at a national training camp on 'Basic Indian Sign Language' organised by the All-India Institute of Speech and Hearing and the Indian Sign Language Research and Training Centre from Monday.

Tags :

.