HomeBreaking NewsLatest NewsPoliticsSportsCrimeCinema

Kashi’s Gyan Vapi : ಇದು ಸತ್ಯದ ಅನಾವರಣ, ಕೃತಿಯ ಅನುವಾದಕ ಮೈಸೂರಿನ ಡಾ.ಜಿ.ಎಲ್.ಶೇಖರ್‌

07:47 PM Aug 26, 2024 IST | mahesh

 

Dr. Vikram Sampath's book is the revelation of the truth of Kashi Gyanvapi. There are no elements for or against any religion in this book. The book is based on the hearing in the Supreme Court on the Gyanvapi controversy and the subsequent verdict of the court.

ಮೈಸೂರು, ಆ.26,2024: (www.justkannada.in news) ಇತಿಹಾಸಕಾರ ಡಾ.ವಿಕ್ರಂ ಸಂಪತ್‌ ಅವರ ಇಂಗ್ಲಿಷ್‌ ಕೃತಿಯ "Waiting for Shiva" ಕನ್ನಡಾನುವಾದ “ ಶಿವನಿಗಾಗಿ ಕಾಯುತ್ತಾ..” ಇದೇ  ಆ.೩೧ರಂದು ಬಿಡುಗಡೆಗೊಳ್ಳಲಿದೆ.

ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್ಸ್ಟಿಟೈೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ಸಭಾಂಗಣದಲ್ಲಿ ಅಂದು ಬೆಳಗ್ಗೆ ೧೧ ಕ್ಕೆ ಕಾರ್ಯಕ್ರಮ ಆಯೋಜನೆ.  ಕಾರ್ಯಕ್ರಮವನ್ನು  ಹಿರಿಯ ಪತ್ರಕರ್ತ ಅಜಿತ್‌ ಹನುಮಕ್ಕನವರ್‌ ನಡೆಸಿಕೊಡುವರು.

ಆಂಗ್ಲ ಭಾಷೆಯ ಈ ಪುಸ್ತಕದ ಕನ್ನಡ ಅನುದಾನವನ್ನು ಮೈಸೂರಿನ ಎನ್. ಐ. ಇ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ  ಡಾ.ಜಿ.ಎಲ್.ಶೇಖರ್‌ ಅವರು ಮಾಡಿದ್ದು, ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದರು.

ಡಾ.ವಿಕ್ರಂ ಸಂಪತ್‌ ಬರೆದಿರುವ ಈ ಕೃತಿ ಒಂದೊಳ್ಳೆ ಪುಸ್ತಕ. ಕಾಶಿ ಜ್ಞಾನವಾಪಿಯ ಸತ್ಯದ ಅನಾವರಣ. ಈ ಪುಸ್ತಕದಲ್ಲಿ ಯಾವುದೇ ಧರ್ಮದ ಪರ ಅಥವಾ ವಿರುದ್ಧದ ಅಂಶಗಳಿಲ್ಲ. ಜ್ಞಾನವ್ಯಾಪಿ ವಿವಾದದ ಬಗ್ಗೆ  ಸುಪ್ರೀಂಕೋರ್ಟ್‌ ನಲ್ಲಿ ನಡೆದ ವಿಚಾರಣೆ, ಆನಂತರ ಕೋರ್ಟ್‌ ನೀಡಿದ ತೀರ್ಪಿನ ಆಧಾರದ ಮೇಲೆ ಈ ಪುಸ್ತಕವನ್ನು ರಚಿಸಲಾಗಿದೆ.

ಔರಂಗಜೇಬನ ಕಾಲದಲ್ಲಿ ಹೇಗೆ ದೇವಾಲಯಗಳ ಮೇಲೆ ದಾಳಿ ನಡೆಸಿ ಅವನ್ನು ಮುಚ್ಚಲಾಗಿತ್ತು ಎಂಬ ಮಾಹಿತಿಯನ್ನು ಒಳಗೊಂಡತೆ, ಆನಂತರ ಭಾರತೀಯ ಪುರಾತತ್ವ ಇಲಾಖೆ ಹೇಗೆ ಆಧುನಿಕ ತಂತ್ರಜ್ಞಾನದ ಸಹಾಯದಿಂದ ಭೂಮಿಯಲ್ಲಿ ಹುದುಗಿದ್ದ ಸತ್ಯವನ್ನು ಅನಾವರಣಗೊಳಿಸಿತು ಎಂಬಲ್ಲಿಯ ತನಕ ಸಂಪೂರ್ಣವಾದ ಮಾಹಿತಿ ಈ ಪುಸ್ತಕದಲ್ಲಿದೆ.

ದೂರದ ಕಾಶಿಯಲ್ಲಿನ ಜ್ಞಾನವ್ಯಾಪಿ ದೇವಾಲಯದಲ್ಲಿ ಹುದುಗಿದ್ದ ಸತ್ಯದ ಅನಾವರಣದ ವೇಳೆ ದೊರೆತ ಕೆಲ ಅಮೂಲ್ಯ ಸಂಗತಿಗಳ ಪೈಕಿ, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿನ ಲಿಪಿಗಳು ಪತ್ತೆಯಾಗಿರುವುದು ವಿಶೇಷ. ಒರ್ವ ಕನ್ನಡಿಗನಾಗಿ ಇದು ನನಗೆ ಅತ್ಯಂತ ಖುಷಿಯ ಸಂಗತಿ.

ಜ್ಞಾನವ್ಯಾಪಿಯ ಕುರಿತಾದ ಡಾ.ವಿಕ್ರಂ ಸಂಪತ್‌ ಅವರ ಕೃತಿ ಈಗಾಗಲೇ  ಮರಾಠಿ, ತೆಲುಗು ಹಾಗೂ ಹಿಂದೆಗೆ ಭಾಷಾಂತರಗೊಂಡಿದೆ. ಈ ಮಾಹಿತಿ ಕರ್ನಾಟಕದವರಿಗೆ ಲಭಿಸಬೇಕು ಎಂಬ ಉದ್ದೇಶದಿಂದ ಇದರ ಕನ್ನಡಾನುವಾದದ ಜವಾಬ್ದಾರಿ ತೆಗೆದುಕೊಂಡೆ.

key words:  Historian Dr. Vikram Sampath's, English book, "Waiting for Shiva", Kannada version, will be released, on August 31.

SUMMARY:

Dr. Vikram Sampath's book is the revelation of the truth of Kashi Gyanvapi. There are no elements for or against any religion in this book. The book is based on the hearing in the Supreme Court on the Gyanvapi controversy and the subsequent verdict of the court.

Tags :
"Waiting for Shiva"English bookHistorian Dr. Vikram Sampath'sKannada versionon August 31.will be released
Next Article