ಶೃಂಗೇರಿ ಶಾರದಾ ಪೀಠದಿಂದ ವಸ್ತ್ರಸಂಹಿತೆ ಜಾರಿ
ಚಿಕ್ಕಮಗಳೂರು,ಜುಲೈ,24,2024 (www.justkannada.in): ಶೃಂಗೇರಿ ಶಾರದಾ ಪೀಠದಿಂದ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿಗೊಳಿಸಿದೆ.
ಶೃಂಗೇರಿ ಶಾರದಾ ದೇವಿ ದರ್ಶನಕ್ಕೆ ಹೋಗುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ ಯಾಗಿದೆ. ಇದೇ ಆಗಸ್ಟ್ 15ರಿಂದ ಶ್ರೀ ಶಾರದಮ್ಮನವರ ದರ್ಶನಕ್ಕೆ ಹಾಗೂ ಗುರುಗಳ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಭಾರತೀಯ ಸಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಸೂಚಿಸಿ ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರುಷರಾದಲ್ಲಿ ಧೋತಿ ಶಲ್ಯ ಮತ್ತು ಉತ್ತರೀಯ ಹಾಗೂ ಮಹಿಳೆಯರು ಸೀರೆ ರವಿಕೆ, ಸಲ್ವಾರ್ – ದುಪಟ್ಟ ಅಥವಾ ಲಂಗ ದಾವಣಿಗಳಂತ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ದೇವರ ದರ್ಶನ ಮಾಡಬಹುದು ಎಂದು ಶೃಂಗೇರಿ ಶಾರದಾ ಪೀಠ ತಿಳಿಸಿದೆ.
ಭಾರತೀಯ ಸಂಪ್ರದಾಯವಲ್ಲದ ಅಥವಾ ದೇವಾಲಯದ ಆಡಳಿತ ಮಂಡಳಿ ತಿಳಿಸಿದ ಉಡುಪು ಧರಿಸದೇ ಬಂದರೆ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ದೇವಸ್ಥಾನದ ಆವರಣ, ತುಂಗಾ ತೀರ, ಕಪ್ಪೆ ಶಂಕರನ ಗುಡಿ ಇಲ್ಲಿಗೆ ಯಾವುದೇ ನಿಯಮಗಳು ಅನ್ವಯವಾಗುವುದಿಲ್ಲ. ಶಾರದಾ ತಾಯಿಯ ದರ್ಶನ ಮಾಡಲು ಮಾತ್ರ ಈ ನಿಯಮ ಕಡ್ಡಾಯ ಮಾಡಲಾಗಿದೆ.
Key words: Dress code, Sringeri, Sarada Peeta