HomeBreaking NewsLatest NewsPoliticsSportsCrimeCinema

ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ: ಡ್ರೋನ್ ,ಕ್ಯಾಮರಾ ಚಿತ್ರೀಕರಣ ನಿಷೇಧ.

11:18 AM Feb 10, 2024 IST | prashanth

ಗುಂಡ್ಲುಪೇಟೆ,ಫೆಬ್ರವರಿ,10,2024(www.justkannada.in): ಕರ್ನಾಟಕ ಊಟಿ ಎಂದೇ ಖ್ಯಾತಿ ಪಡೆದಿರುವ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಡ್ರೋನ್, ಕ್ಯಾಮರಾ ಬಳಕೆಗೆ ನಿಷೇಧ ಹೇರಲಾಗಿದೆ.

ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಡ್ರೋನ್ ಮತ್ತು ಕ್ಯಾಮರಾ ಚಿತ್ರೀಕರಣ ನಿಷೇಧಿಸಿ ತಹಶೀಲ್ದಾರ್ ಟಿ.ರಮೇಶ್ ಬಾಬು ಆದೇಶ ಹೊರಡಿಸಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಗೋಪಾಲ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರು, ಪ್ರವಾಸಿಗರ ಚೆಲ್ಲಾಟಕ್ಕೆ ಬ್ರೇಕ್ ಹಾಕಲು ಈ ನಿಷೇಧ ಹೇರಲಾಗಿದೆ.  ಪ್ರವಾಸಿಗರು ಡ್ರೋನ್, ಮೊಬೈಲ್ ಕ್ಯಾಮರಾಗಳ ಮೂಲಕ ಮನ ಬಂದಂತೆ ಫೋಟೋ ತೆಗೆಯುತ್ತಿದ್ದರು. ಪ್ರತಿನಿತ್ಯ ದೇವಸ್ಥಾನದ ಬಳಿ ಬರುವ ಕಾಡಾನೆಯ ದೃಶ್ಯವನ್ನು ಸೆರೆ ಹಿಡಿದು  ಕಾಡು ಪ್ರಾಣಿಗಳನ್ನ ಕೀಟಲೆ ಮಾಡುತ್ತಿದ್ದರು.

ಈ ಸಂಬಂಧ ವಲಯಾಧಿಕಾರಿ ಮಂಜುನಾಥ್ ಅವರು ತಹಶೀಲ್ದಾರ್ ಗೆ ದೂರು ನೀಡಿದ್ದರು. ಅರಣ್ಯಾಧಿಕಾರಿ ಕೋರಿಕೆ ಮೇರೆಗೆ ತಹಶೀಲ್ದಾರ್ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು,  ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಸುತ್ತಮುತ್ತ ಪ್ರದೇಶದಲ್ಲಿ ಕಾಡುಪ್ರಾಣಿಗಳ ಕ್ಯಾಮರಾ ಚಿತ್ರೀಕರಣ ಹಾಗೂ ಡ್ರೋನ್ ಬಳಕೆ ಮಾಡುವುದಕ್ಕೆ  ಸಂಪೂರ್ಣ ನಿಷೇಧ ಮಾಡಿ  ಮುಜರಾಯಿ ಇಲಾಖೆಯ ಅಧಿಕಾರಿ ಹಾಗೂ ತಹಶೀಲ್ದಾರ್ ಟಿ.ರಮೇಶ್ ಬಾಬು ಆದೇಶ ಹೊರಡಿಸಿದ್ದಾರೆ.

Key words: Drone – camera- filming -banned - Himavad Gopalaswamy temple.

Tags :
Drone – camera- filming -banned - Himavad Gopalaswamy temple.
Next Article