ರಾಜ್ಯದಲ್ಲಿ ಬರಗಾಲ: ಮೋಡ ಬಿತ್ತನೆಗೆ ಶೀಘ್ರವೇ ಕ್ರಮ – ಡಿಸಿಎಂ ಡಿ.ಕೆ ಶಿವಕುಮಾರ್.
03:25 PM Dec 08, 2023 IST
|
prashanth
ಬೆಳಗಾವಿ,ಡಿಸೆಂಬರ್,8,2023(www.justkannada.in): ರಾಜ್ಯದಲ್ಲಿ ಈ ಬಾರಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರಗಾಲ ಆವರಿಸಿದ್ದು , ಈ ಹಿನ್ನೆಲೆಯಲ್ಲಿ ಮೋಡಬಿತ್ತನೆಗೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ರಾಜ್ಯದಲ್ಲಿ ಬರಗಾಲ ಹಿನ್ನೆಲೆ ಮೋಡ ಬಿತ್ತನೆ ಮಾಡುವಂತೆ ಸದನಲ್ಲಿ ಪ್ರಕಾಶ್ ಕೋಳಿವಾಡ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು. ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಮೋಡ ಬಿತ್ತನೆ ಈ ಹಿಂದೆ ಯಶಸ್ಸು ಕಂಡಿದೆ. ಹೀಗಾಗಿ ಈ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚಿಸಿ ನಿರ್ಧಾರ ಕೈಘೊಳ್ಳುತ್ತೇವೆ ಎಂದರು.
ಮೋಡ ಬಿತ್ತನೆಯನ್ನು ಬಹಳ ರಾಜ್ಯಗಳಲ್ಲಿ ಪ್ರಯೋಗ ಮಾಡುತ್ತಿದ್ದಾರೆ. ಈ ಬಗ್ಗೆ ಹಣಕಾಸು ಇಲಾಖೆ ಜತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇನೆ, ರಾಜ್ಯ ಸರ್ಕಾರದಿಂದ ಶೀಘ್ರವೇ ಮೋಡ ಬಿತ್ತನೆ ಆರಂಭವಾಗಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
Key words: Drought – state- Action - Cloud seeding - DCM -DK Shivakumar.
Next Article