ಚುನಾವಣೆ ಆರೋಗ್ಯಕರವಾಗಿ ಎದುರಿಸಬೇಕು: ಅಡ್ಡದಾರಿಯಿಂದಲ್ಲ-ಬಿಜೆಪಿ ಅಭ್ಯರ್ಥಿ ಸಿ.ಎನ್ ಡಾ.ಮಂಜುನಾಥ್.
05:24 PM Apr 11, 2024 IST
|
prashanth
ಬೆಂಗಳೂರು,ಏಪ್ರಿಲ್,11,2024 (www.justkannada.in): ಮೈತ್ರಿ ಕಾರ್ಯಕರ್ತರ ಮೇಲೆ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಡಾ.ಸಿ.ಎನ್ ಮಂಜುನಾಥ್, ಇದು ಸಂಸ್ಕೃತಿ ಅಲ್ಲ. ಹೆದರಿಸೋದು ಸರಿಯಲ್ಲ. ಚುನಾವಣೆ ಆರೋಗ್ಯಕರವಾಗಿ ಎದುರಿಸಬೇಕು ಹೊರತು ಅಡ್ಡದಾರಿಯಿಂದಲ್ಲ.ಘಟನೆ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೂ ತರುತ್ತೇವೆ. ಚುನಾವಣೆ ವಿರುದ್ದ ದಿಕ್ಕಲ್ಲಿ ಸಾಗ್ತಿದೆ ಅಂತಾ ಅವರಿಗೆ ಗೊತ್ತಾಗಿರಬೇಕು. ಈ ಸಂಬಂಧ ಡಿಜಿ ಮತ್ತು ಐಜಿಪಿ ಜೊತೆಗೂ ಮಾತನಾಡಿದ್ದೇನೆ ಎಂದು ತಿಳಿಸಿದರು.
ಡಾ.ಸಿ.ಎನ್ ಮಂಜುನಾಥ್ ಪರ ಪ್ರಚಾರ ಮಾಡಿದವರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು.
Key words: Elections, Healthy, BJP, CN Dr. Manjunath.
Next Article