For the best experience, open
https://m.justkannada.in
on your mobile browser.

BRT ಅರಣ್ಯ ಪ್ರದೇಶದಲ್ಲಿ ಎರಡು ಆನೆಗಳ ಅಸ್ಥಿಪಂಜರ ಪತ್ತೆ

10:28 AM Aug 31, 2024 IST | mahesh
brt ಅರಣ್ಯ ಪ್ರದೇಶದಲ್ಲಿ ಎರಡು ಆನೆಗಳ ಅಸ್ಥಿಪಂಜರ ಪತ್ತೆ

The bodies of the dead elephants were found in a skeletal state. Only skulls and tusks were found. The carcass of one elephant was found in Yelandur range of BRT Tiger Reserve while the carcass of another elephant was found in Bylur range.

ಚಾಮರಾಜನಗರ ,ಆ.31,2024: (www.justkannada.in news)  ಬಿಆರ್ಟಿ ಅರಣ್ಯ ಪ್ರದೇಶದಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಆನೆಗಳ ಸಾವು ಬೆಳಕಿಗೆ ಬಂದಿದೆ.

ಮೃತ ಆನೆಗಳ ದೇಹ  ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆ. ತಲೆ ಬರುಡೆ, ದಂತಗಳು ಮಾತ್ರ ಪತ್ತೆ. ಬಿಆರ್ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಯಳಂದೂರು ವಲಯದಲ್ಲಿ ಒಂದು ಆನೆ ಕಳೆಬರಹ ಪತ್ತೆಯಾದರೆ, ಬೈಲೂರು ವಲಯದಲ್ಲಿ ಮತ್ತೊಂದು ಆನೆಯ ಮೃತದೇಹ ಪತ್ತೆಯಾಗಿದೆ.

ಬೈಲೂರು ರೇಂಜಿನಲ್ಲಿ ಪತ್ತೆಯಾಗಿರುವ ಆನೆ,  ಸುಮಾರು 8 ತಿಂಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಅದೇ ರೀತಿ ಯಳಂದೂರು ವಲಯದ ಆನೆ ಸುಮಾರು 2 ತಿಂಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ನಿರ್ಲಕ್ಷ್ಯದ ಆರೋಪ:

ಪತ್ತೆಯಾಗಿರುವ ಈ ಎರಡು ಆನೆಗಳ ಕಳೆಬರಹದ ಆಧಾರದ ಮೇಲೆ ಇವು ಮೃತಪಟ್ಟು ತಿಂಗಳುಗಳೇ ಕಳೆದಿದೆ. ಆದರೂ ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನಕ್ಕೆ ಬಂದಿಲ್ಲ. ಇದು ಗಸ್ತಿನಲ್ಲಿರುವ ಅರಣ್ಯ ಸಿಬ್ಬಂದಿಗಳ ನಿರ್ಲಕ್ಷ್ಯ ಎಂದು ಆರೋಪಿಸಲಾಗಿದೆ.

ಆನೆಗಳು ಮೃತಪಟ್ಟು, ಕೊಳೆತು ಅಸ್ಥಿ ಪಂಜರವಾದರೂ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ಬಾರದೆ ಇರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.  ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಪರಿಸರ ವಾದಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

key words: Skeletons, of two elephants, found in, BRT forest area

SUMMARY: 

The bodies of the dead elephants were found in a skeletal state. Only skulls and tusks were found. The carcass of one elephant was found in Yelandur range of BRT Tiger Reserve while the carcass of another elephant was found in Bylur range.

Tags :

.