ಹಳೆ ವಿಷಯ ಮುಂದಿಟ್ಟುಕೊಂಡು ʼ ಎಮರ್ಜೆನ್ಸಿʼ ಪ್ರತಿಭಟನೆ: ಪಕ್ಷದ ಧೋರಣೆ ಲೇವಡಿ ಮಾಡಿದ ವಿಶ್ವನಾಥ್.
ಮೈಸೂರು, ಜೂ.26,2024 : (www.justkannada.in news) ತುರ್ತು ಪರಿಸ್ಥಿತಿಯಿಂದ ಬಡವರಿಗೆ ಒಳ್ಳೆಯದಾಗಿದೆ. ಹಳೆ ವಿಚಾರಗಳನ್ನು ಇನ್ನೆಷ್ಟು ದಿನ ಮಾತನಾಡುತ್ತೀರಿ. ಪ್ರತಿಭಟನೆಯಿಂದ ಲಾಭವಾದರೂ ಏನು?
ಬಿಜೆಪಿಯಿಂದ ತುರ್ತು ಪರಿಸ್ಥಿತಿಯ ಕರಾಳ ದಿನ ಆಚರಣೆ ವಿಚಾರ. ಬಿಜೆಪಿ ಎಂ ಎಲ್ಸಿ ಹೆಚ್ ವಿಶ್ವನಾಥ್ ಲೇವಡಿ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್ ಹೇಳಿದಿಷ್ಟು..
ಕಳೆದ 50 ವರ್ಷಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಅಂದು ಉಣ್ಣುವ ತಟ್ಟೆಯನ್ನು, ಹೆತ್ತ ಮಕ್ಕಳನ್ನು ಅಡವಿಟ್ಟು ಬದುಕುತ್ತಿದ್ದವರು. ಇಂದು ಅಂತಹ ಪರಿಸ್ಥಿತಿ ಇದಿಯಾ?
ತುರ್ತು ಪರಿಸ್ಥಿಯನ್ನು ದೇವರಾಜು ಅರಸು ಅವರು ಸಂವೃದ್ಧ ಅಭಿವೃದ್ಧಿಗೆ ಬಳಸಿಕೊಂಡರು. ತುರ್ತು ಪರಿಸ್ಥಿತಿ ಬಡವರ ಪರ ಇದ್ದ ಅಲೆ. ಇದರಿಂದ ಬಡವರಿಗೆ ಬಹಳ ಒಳ್ಳೆಯದಾಯಿತು. ತುರ್ತು ಪರಿಸ್ಥಿಯನ್ನು ಟೀಕೆ ಮಾಡುತ್ತಿದ್ದೇವೆ ಹೊರತು ಅದರಿಂದ ಉಂಟಾದ ಲಾಭವನ್ನು ಯಾರು ವಿಶ್ಲೇಷಣೆ ಮಾಡಲಿಲ್ಲ.
ಬಿಜೆಪಿ ಮಾಜಿ ಶಾಸಕ ರಾಜೀವ್ ಬೆಳಗಾವಿಯಿಂದ ಮೈಸೂರಿಗೆ ಬಂದು ಪ್ರತಿಭಟನೆ ಮಾಡುತ್ತಿದ್ದಾನೆ. ಆತ ಒಬ್ಬ ದಲಿತ, ತುರ್ತು ಪರಿಸ್ಥಿತಿಯಿಂದ ಆ ಸಮುದಾಯಕ್ಕೆ ಲಾಭವಾಗಿದೆ. ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು. ತುರ್ತು ಪರಿಸ್ಥಿತಿ 50 ವರ್ಷಗಳ ಹಳೆ ಸಂಗತಿ. ಇಂಥ ಹಳೆ ವಿಚಾರವನ್ನೇಕೆ ಮತ್ತೆ ಮತ್ತೆ ಮುನ್ನೆಲೆಗೆ ತರುತ್ತಿರಿ ಸುದ್ದಿಗೋಷ್ಠಿಯಲ್ಲಿ ಹೆಚ್ ವಿಶ್ವನಾಥ್ ಪ್ರಶ್ನೆ.
ವಚನ ಭ್ರಷ್ಟ ಸಿಎಂ:
ರಾಜ್ಯ ಸರ್ಕಾರದಿಂದ ಹಾಲಿನ ಬೆಲೆ ಏರಿಕೆ ವಿಚಾರ.ಸಿಎಂ ಸಿದ್ಧರಾಮಯ್ಯ ವಚನ ಭ್ರಷ್ಟರಾಗಿದ್ದಾರೆ. ಎಂಎಲ್ಸಿ ಹೆಚ್ ವಿಶ್ವನಾಥ್ ವ್ಯಂಗ್ಯ.
ಚುನಾವಣೆ ಮುನ್ನ ಜನರಿಗೆ ಯಾವುದೇ ಬೆಲೆ ಹೆಚ್ಚು ಮಾಡುವುದಿಲ್ಲ ಎಂದು ವಚನ ನೀಡಿದ್ದರು. ಆದರೆ ಈಗ ಮಾಡುತ್ತಿರುವುದು ಏನು. ಜನರಿಗೆ ಟೋಪಿ ಹಾಕುವ ಕೆಲಸ ಮಾಡುತ್ತಿದ್ದೀರಿ. ಈ ಮೂಲಕ ವಚನ ಕೊಟ್ಟು ವಚನ ಭ್ರಷ್ಟರಾಗಿದ್ದೀರಿ. ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಚಾಟೀ.
ಮನೆಯಲ್ಲಿ ಕಾಫಿ ಟೀ ಕುಡಿಯಲು ಜಿ ಎಸ್ ಟಿ ಕಟ್ಟಬೇಕಾಗಿದೆ. ಸಿಎಂ ಸಿದ್ದರಾಮಯ್ಯ ಕೂಡಲೇ ನಾಡಿನ ಪ್ರಮುಖರ ಸಭೆ ಕರೆಯಬೇಕು. ಇದು ಒಳ್ಳೆಯ ಬೆಳವಣಿಗೆಯಲ್ಲ . ಸುದ್ದಿಗೋಷ್ಟಿಯಲ್ಲಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿಕೆ.
ಅಯ್ಯೋ ಅಯೋದ್ಯೆ..?:
ಅಯೋದ್ಯೆಯ ರಾಮನ ಗರ್ಭಗುಡಿ ಒಂದು ಮಳೆಯನ್ನ ತಡೆಯಲಾಗಲಿಲ್ಲ. ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ವ್ಯಂಗ್ಯ. ರಾಮ ಮಂದಿರವನ್ನು ಬಿಜೆಪಿಯವರು ಮಾಡಿದ್ದು. ಇದನ್ನ ಕಾಂಗ್ರೆಸ್ ನವರು ಮಾಡಿದ್ದಾ? ರಾಮ ಮಂದಿರದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದೆ ಬಿಜೆಪಿ. ಆದರೆ ಗರ್ಭಗುಡಿಯ ಗೋಡೆ ಉಳಿದಿಲ್ಲ. ಇದು ಏನನ್ನು ಸೂಚಿಸುತ್ತದೆ? ಬಿಜೆಪಿಗರಿಗೆ ಹೆಚ್ ವಿಶ್ವನಾಥ್ ಪ್ರಶ್ನೆ.
ಅಂದಭಿಮಾನ:
ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಅಭಿಮಾನಿಗಳಿಂದ ಅಂದಭಿಮಾನ ವಿಚಾರ. ಅಂದಾಭಿಮಾನ ಎಷ್ಟು ದಿನ ಇರುತ್ತದೆ? ಸದ್ಯದಲ್ಲಿ ಯಾರ ಬಗ್ಗೆ ಓದಿ ತಿಳಿದುಕೊಳ್ಳಬೇಕು ಎನ್ನುವುದು ಕಷ್ಟವಾಗಿದೆ. ಒಂದು ಕಡೆ ಪ್ರಜ್ವಲ್ ರೇವಣ್ಣ, ಸೂರಜ್ ಹಾಗೂ ದರ್ಶನ್ ಬಗ್ಗೆ ತಿಳಿದುಕೊಳ್ಳಲಾಗುತ್ತಾ.? ಅಭಿಮಾನಿಗಳ ಅಭಿಮಾನ ಎಷ್ಟು ದಿನ ಇರುತ್ತೆ. ನೆನಪಿನ ಶಕ್ತಿ ಬೇಗ ಹೊರಟು ಹೋಗುತ್ತದೆ. ಭೂಮಿ, ನೀರ್ ಕೊಟ್ಟ ದೇವರಾಜ ಅರಸುರನ್ನೇ ಮರೆತುಬಿಟ್ಟರು ಜನ. ಇನ್ನೂ ಇದೆಲ್ಲ ಎಷ್ಟು ದಿನ ಇರುತ್ತದೆ.
ದರ್ಶನ್ ನಮ್ಮೂರಿನವನು, ಜನ ಎಲ್ಲಾ ರೀತಿಯ ಪ್ರೋತ್ಸಾಹ, ಅಭಿಮಾನ ಕೊಟ್ರು. ರಾಮಾಯಣವು ಹೆಣ್ಣಿಗಾಗಿ ನಡೆಯಿತು. ದರ್ಶನ್ ಸಹ ಹೆಣ್ಣಿಗಾಗಿಯೇ ಜೈಲಿಗೆ ಹೋಗುವಂತಾಯಿತು. ಸುದ್ದಿಗೋಷ್ಟಿಯಲ್ಲಿ ಎಂ ಎಲ್ ಸಿ ಹೆಚ್ ವಿಶ್ವನಾಥ್ ಹೇಳಿಕೆ.
key words: MLC Vishwanath, against BJP, emergency, protest