For the best experience, open
https://m.justkannada.in
on your mobile browser.

ಸಮ ಸಮಾಜದ ಮೌಲ್ಯ ಬಿತ್ತಿದ ಬಸವತತ್ವವೇ ಶಾಶ್ವತ- ಸಿಎಂ ಸಿದ್ದರಾಮಯ್ಯ

11:22 AM Jun 21, 2024 IST | prashanth
ಸಮ ಸಮಾಜದ ಮೌಲ್ಯ ಬಿತ್ತಿದ ಬಸವತತ್ವವೇ ಶಾಶ್ವತ  ಸಿಎಂ ಸಿದ್ದರಾಮಯ್ಯ

ಬಳ್ಳಾರಿ ಜೂನ್,21,2024 (www.justkannada.in):  ವರ್ಗರಹಿತ, ಜಾತಿ ರಹಿತ ಸಮ ಸಮಾಜದ ಮೌಲ್ಯವನ್ನು ಮನುಕುಲದಲ್ಲಿ ಬಿತ್ತಿದ ಬಸವ ತತ್ವವೇ ಶಾಶ್ವತವಾದದ್ದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಶ್ವಾಸಯೋಗ ಸಂಸ್ಥೆ ಮತ್ತು ಸಂತೋಷ್ ಲಾಡ್ ಫೌಂಡೇಷನ್ ಆಯೋಜಿಸಿದ್ದ "ಯೋಗ ರತ್ನ-2024" ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಘೋಷಣೆ ಮಾಡುವುದಕ್ಕೆ ಮೊದಲೇ ನಾನು ರಾಜ್ಯದಲ್ಲಿ ಯೋಗದಿನವನ್ನು ಆಚರಿಸುವ ಮೂಲಕ ಯೋಗ ವಿಜ್ಞಾನವನ್ನು ಜನರಲ್ಲಿ ವಿಸ್ತರಿಸುವ ಕಾರ್ಯಕ್ಕೆ ಮುಂದಾದೆ ಎಂದರು.

ಸಮಾಜದ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ತುಡಿಯುತ್ತಿರುವ ಸ್ವಾಮೀಜಿಗಳು ಒಟ್ಟಾಗಿ ತಮ್ಮನ್ನು ಮತ್ತು ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಒಪ್ಪಿ ಆಶೀರ್ವದಿಸಿದಕ್ಕಾಗಿ ಸ್ವಾಮೀಜಿಗಳ ಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧನ್ಯವಾದ ಅರ್ಪಿಸಿದರು.

ನಿಮ್ಮ ಮನಸ್ಸು , ದೇಹ, ಅಧ್ಯಾತ್ಮಿಕ ಚೈತನ್ಯ ಆರೋಗ್ಯಕರವಾಗಿ ಇರಬೇಕಾದರೆ ಯೋಗ ವಿಜ್ಞಾನದ ಜ್ಞಾನವನ್ನು ಕಲಿತು, ಪ್ರಾಕ್ಟೀಸ್ ಮಾಡಬೇಕು. ಇದರಿಂದ ಮನಸ್ಸು, ದೇಹ ಮತ್ತು ದೇಶ ರೋಗ ರಹಿತವಾಗಿ ಸಮಾಜಮುಖಿಯಾಗಿ ಬೆಳೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.

ಪರಸ್ಪರ ಮನುಷ್ಯ ಗೌರವ, ಮನುಷ್ಯ ಪ್ರೇಮ  ಯೋಗ ವಿಜ್ಞಾನದಿಂದ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ವಚನಾನಂದ ಸ್ವಾಮಿಗಳು, ಇಳಕಲ್ ಮಠದ ಶರಣರು ಸೇರಿ 50 ಮಂದಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್, ಸಂಸದ ಇ. ತುಕಾರಾಂ, ಮಾಜಿ ಸಚಿವ ಮುರುಗೇಶ್ ನಿರಾಣಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.

Key words:  equal, society, Basava, Principle, CM Siddaramaiah

Tags :

.