For the best experience, open
https://m.justkannada.in
on your mobile browser.

ರಾಮಲಲ್ಲಾನ ವಿಡಿಯೋ ಪ್ರಸ್ತುತಿಪಡಿಸಿದ್ದ ಶೀಟೇಲ್ಸ್ ಗೆ 4(ಜಿ) ವಿನಾಯಿತಿ; ಮತದಾರರ ಜಾಗೃತಿಗೆ 49 ಲಕ್ಷ ವೆಚ್ಚ.

03:16 PM Apr 18, 2024 IST | prashanth
ರಾಮಲಲ್ಲಾನ ವಿಡಿಯೋ ಪ್ರಸ್ತುತಿಪಡಿಸಿದ್ದ ಶೀಟೇಲ್ಸ್ ಗೆ 4 ಜಿ  ವಿನಾಯಿತಿ  ಮತದಾರರ ಜಾಗೃತಿಗೆ 49 ಲಕ್ಷ ವೆಚ್ಚ

ಬೆಂಗಳೂರು,ಏಪ್ರಿಲ್,18,2024 :  ಫೇಸ್‌ ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮತದಾರರ ಜಾಗೃತಿ, ಮತದಾರರನ್ನು ಸೆಳೆಯಲು ಶೀತಲ್‌ ಶೆಟ್ಟಿ ಅವರ ಶೀ ಟೇಲ್ಸ್‌ ಎಂಟರ್‌ ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ ಸೇವೆ ಪಡೆಯಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಮುಂದಾಗಿದೆ.

ಶೀ ಟೇಲ್ಸ್‌ ಎಂಟರ್‌ ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ನಿಂದ ಮೂರು ತಿಂಗಳವರೆಗೆ ಸೇವೆ ಪಡೆಯಲಿರುವ ಸರ್ಕಾರವು ಇದಕ್ಕಾಗಿ 49.00 ಲಕ್ಷ ರೂ. ವೆಚ್ಚ ಮಾಡುತ್ತಿದೆ. ಈ ಸಂಬಂಧ 2024ರ ಫೆ.28ರಂದು ಅಧಿಸೂಚನೆ ಹೊರಡಿಸಿದೆ.

ಅಧಿಸೂಚನೆಯಲ್ಲೇನಿದೆ?

ಸಾರ್ವತ್ರಿಕ ಲೋಕಸಭೆ ಚುನಾವಣೆ 2024ರ ಸಂದರ್ಭದಲ್ಲಿ ಮತದಾರರ ಜಾಗೃತಿಗಾಗಿ ಹಾಗೂ ಮತದಾರರನ್ನು ಹಾಗೂ ನಗರವಾಸಿಗಳನ್ನು ಸೆಳೆಯಲು ಇನ್‌ಸ್ಟಾಗ್ರಾಂ, ಫೇಸ್‌ ಬುಕ್‌, ಟ್ವಿಟರ್‌, ಯೂಟ್ಯೂಬ್‌, ಸೋಷಿಯಲ್‌ ಮೀಡಿಯಾ ಜಾಲತಾಣ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಳ್ಳಲು ಶೀ ಟೇಲ್ಸ್‌ ಎಂಟರ್‌ಟೈನ್‌ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ ಸಂಸ್ಥೆಯ ಸೇವೆಯನ್ನು ಪಡೆಯಲು 49,00,540 ರು. ವೆಚ್ಚದಲ್ಲಿ ಮೂರು ತಿಂಗಳ ಅವಧಿಗೆ 2024ರ ಮಾರ್ಚ್‌ 1ರಿಂದ 2024ರ ಮೇ 31ರವರೆಗೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999ರ ಕಲಂ 4(ಜಿ) ಅಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವಿನಾಯಿತಿ ನೀಡಿದೆ.

ಇದೇ ಏಪ್ರಿಲ್‌ ಮತ್ತು ಜೂನ್‌ನಲ್ಲಿ ಲೋಕಸಭೆ ಚುನಾವಣೆಗಳು ನಡೆಯಲಿವೆ ಎಂದು ಗೊತ್ತಿದ್ದರೂ ಸಹ ಸರ್ಕಾರವು ಈ ಸಂಬಂಧ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ. ಅಲ್ಲದೇ ಯಾವುದೇ ಟೆಂಡರ್‌ ಆಗಲೀ, ಅಲ್ಪಾವಧಿ ಟೆಂಡರ್‌, ಆಸಕ್ತಿ ವ್ಯಕ್ತಪಡಿಸುವಿಕೆ (ಇಒಐ)ಯನ್ನೂ ಆಹ್ವಾನಿಸಿರಲಿಲ್ಲ ಎ೦ದು ಗೊತ್ತಾಗಿದೆ.

ಮೂಲತಃ ಶೀ ಟೇಲ್ಸ್‌ ಎಂಟರ್‌ಟೈನ್‌ ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌, ಸಿನಿಮಾ ಸೇರಿದಂತೆ ಮನರಂಜನೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. "ಮತದಾರರ ಜಾಗೃತಿ ಕುರಿತು ಸರ್ಕಾರದ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿಲ್ಲ. ಶೀ ಟೇಲ್ಸ್‌ ಎಂಟರ್‌ಟೈನ್‌ಮಂಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಈ ಬಗ್ಗೆ ಯಾವುದೇ ಮಾಹಿತಿ, ವಿವರಗಳಿಲ್ಲ ಶೀತಲ್‌ ಶ್ರೀಧರ್‌ ಶೆಟ್ಟಿ ಎಂಬುವರು ಶೀ ಟೇಲ್ಸ್‌ ಎಂಟರ್‌ಟೈನ್‌ ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ ನ್ನು ಮುನ್ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷವೆಂದರೇ ಶೀ ಟೇಲ್ಸ್‌ ಎಂಟರ್‌ ಟೈನ್‌ ಮೆಂಟ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯು ಅಯೋಧ್ಯೆಯ ರಾಮಲಲ್ಲಾನ ಕುರಿತು ವಿಡಿಯೋವನ್ನು ಜನವರಿ 2024ರಲ್ಲಿ ಪ್ರಸ್ತುತಿ ಪಡಿಸಿತ್ತು. 'ಪ್ರತಿ ಸ್ವರದಲ್ಲಿ ಸಂಭ್ರಮ, ಆಲಾಪದಲ್ಲಿ ಜೋಗುಳ, ನೂರಾರು ಕಾಲ ಕಾದು ಕುಳಿತ ಜನರಿಗೆ ಎದ್ದು ಕುಣಿದು ಜೈ ಶ್ರೀ ರಾಮ್‌ ಎನ್ನುತ್ತಾ ಅದ್ಧೂರಿಯಾಗಿ ಆಯೋಧ್ಯೆಗೆ ರಾಮ ಲಲ್ಲಾನನ್ನು ಈ ಹಾಡಿನೊಂದಿಗೆ ಬರ ಮಾಡಿಕೊಳ್ಳುವ ಸಮಯ. ಘರ್ಜಿಸಿ ಹೇಳಿ, ಜೈ ಶ್ರೀ ರಾಮ್‌॥ ಎಂದು ಪ್ರಚುರಪಡಿಸಿರುವುದು ಕಂಪನಿಯ ಸಾಮಾಜಿಕ ಜಾಲತಾಣಗಳಿಂದ ಕಂಡು ಬಂದಿದೆ.

ಕೃಪೆ..

The file (ದಿ ಫೈಲ್)

Key words: Exemption, Sheetals4(g), voter, awareness

Tags :

.