For the best experience, open
https://m.justkannada.in
on your mobile browser.

ಬೆಂಗಳೂರು-ಮೈಸೂರು ಹೆದ್ದಾರಿಗೆ ಬರಲಿದೆ ಪ್ರಾಯೋಗಿಕ ಜಿಪಿಎಸ್ ಆಧಾರಿತ ಟೋಲ್.

10:36 AM Feb 12, 2024 IST | prashanth
ಬೆಂಗಳೂರು ಮೈಸೂರು ಹೆದ್ದಾರಿಗೆ ಬರಲಿದೆ ಪ್ರಾಯೋಗಿಕ ಜಿಪಿಎಸ್ ಆಧಾರಿತ ಟೋಲ್

ಬೆಂಗಳೂರು, ಫೆಬ್ರವರಿ,12,2024(www.justkannada.in):  ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.

ಬಿಜೆಪಿ ಸಂಸದ ಲಹರ್ ಸಿಂಗ್ ಸಿರೋಯಾ ಅವರ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಅಡೆತಡೆ ಇಲ್ಲದ ಫ್ರೀ-ಫ್ಲೋ-ಟೋಲಿಂಗ್ ಗೆ ಅವಕಾಶ ನೀಡುವ ಜಿಪಿಎಸ್ ಆಧಾರಿತ ವ್ಯವಸ್ಥೆಯಂತಹ ಹೊಸ ತಂತ್ರಜ್ಞಾನಗಳ ಕುರಿತು ಸಲಹೆ ಪಡೆಯಲು ರಸ್ತೆ ಸಾರಿಗೆ ಸಚಿವಾಲಯವು ಕನ್ಸಲ್ಟೆಂಟ್ ನೇಮಕ ಮಾಡಿದೆ ಎಂದು ವಿವರಿಸಿದ್ದಾರೆ.

ಜಿಎನ್ ಎಸ್ಎಸ್ ಆಧಾರಿತ ಟೋಲಿಂಗ್ ಬಗ್ಗೆ ತಿಳಿಸಿದ ಸಚಿವ ನಿತಿನ್ ಗಡ್ಕರಿ, ಈ ವ್ಯವಸ್ಥೆಯು ಹೆದ್ದಾರಿಯಲ್ಲಿ ವಾಹನ ಇರುವ ಜಾಗವನ್ನು ತಿಳಿಸುತ್ತದೆ ಹಾಗೂ ಪ್ರಯಾಣಿಸಿದ ದೂರವನ್ನು ಆಧರಿಸಿ ಶುಲ್ಕ ನಿರ್ಧರಿಸುತ್ತದೆ. ಲೋಕಸಭಾ ಚುನಾವಣೆಗೆ ಮೊದಲು ಬೆಂಗಳೂರು-ಮೈಸೂರು ಎನ್ಎಚ್-275 ಸೇರಿದಂತೆ ಆಯ್ದ ಹೆದ್ದಾರಿಗಳಲ್ಲಿ ಪ್ರಾಯೋಗಿಕ ಯೋಜನೆ ಜಾರಿ ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

ಸಂಸದ ಲಹರ್ ಸಿಂಗ್ ಅವರ ಉಪನಗರ ರೈಲುಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಬೆಂಗಳೂರು ಹಾಗೂ ಉಪನಗರಗಳ ನಡುವೆ ರೈಲ್ವೆ ಸಂಪರ್ಕ ಕಲ್ಪಿಸಲು 742 ಕಿ.ಮೀ. ಉದ್ದದ ಮಾರ್ಗಕ್ಕಾಗಿ ಫೈನಲ್ ಲೊಕೇಶನ್ ಸರ್ವೆ (FLS) ಮಾಡಲು ಮಂಜೂರಾತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸಚಿವ ವೈಷ್ಣವ್ ಅವರು ಬೆಂಗಳೂರು ಉಪನಗರ ರೈಲು ಯೋಜನೆಯ ಬಗ್ಗೆಯೂ ವಿವರ ನೀಡಿದ್ದಾರೆ. ಇದು ನಾಲ್ಕು ಮಾರ್ಗ ಒಳಗೊಂಡಿದೆ:

  1. ಕಾರಿಡಾರ್-1: ಕೆಎಸ್ಆರ್ ಬೆಂಗಳೂರು – ದೇವನಹಳ್ಳಿ(41.4 Km)
  2. ಕಾರಿಡಾರ್-2: ಬೈಯ್ಯಪ್ಪನಹಳ್ಳಿ– ಚಿಕ್ಕಬಾಣಾವರ (25.01 Km)
  3. ಕಾರಿಡಾರ್-3: ಕೆಂಗೇರಿ – ವೈಟ್ ಫೀಲ್ಡ್ (35.52 Km)
  4. ಕಾರಿಡಾರ್-4: ಹೀಲಲಿಗೆ – ರಾಜಾನುಕುಂಟೆ (46.25 Km)

ಸಚಿವರು ಈ ಯೋಜನೆಯ ಪ್ರಗತಿಯ ಬಗ್ಗೆ ತಿಳಿಸಿದ್ದು, ಕಾರಿಡಾರ್ 2 ಹಾಗೂ 4ರ ಭೂ ಸ್ವಾಧೀನ ಪೂರ್ಣಗೊಂಡಿದೆ. ಕಾರಿಡಾರ್-2 ರಲ್ಲಿ ಕಾಮಗಾರಿ ನಡೆಯುತ್ತಿದೆ. ಕಾರಿಡಾರ್-4 ಕ್ಕೆ ಇತ್ತೀಚಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಕಾರಿಡಾರ್ 1 ಹಾಗೂ 3 ರಲ್ಲಿ ಸರ್ವೆ ಕಾರ್ಯ ಹಾಗೂ ಭೌಗೋಳಿಕ ಸಮೀಕ್ಷೆ ಪೂರ್ಣವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಒಟ್ಟು 742 ಕಿ.ಮೀ. ಉದ್ದದ ಮಾರ್ಗಕ್ಕೆ ಎಫ್ಎಲ್ಎಸ್ ಮಂಜೂರಾಗಿದೆ. ಇದು ಬೆಂಗಳೂರು ಹಾಗೂ ಸುತ್ತಲಿನ ನಗರಗಳನ್ನು ಸಂಪರ್ಕಿಸಲಿದೆ. ಬೆಂಗಳೂರು ನಗರದಲ್ಲಿ ಡಬಲ್ ಲೈನ್ ನ ವೃತ್ತಾಕಾರದ ಮಾರ್ಗ, ಬೆಂಗಳೂರು-ತುಮಕೂರು ಕ್ವಾಡ್ರಪ್ಲಿಂಗ್ (ನಾಲ್ಕು ಮಾರ್ಗ), ಚಿಕ್ಕಬಾಣಾವಾರ-ಹಾಸನ ಡಬಲಿಂಗ್, ಬೆಂಗಳೂರು-ಮೈಸೂರು ಕ್ವಾಡ್ರಪ್ಲಿಂಗ್ ಹಾಗೂ ಬಂಗಾರಪೇಟೆ-ಜೋಲಾರಪಟ್ಟಿ ಕ್ವಾಡ್ರಪ್ಲಿಂಗ್ ಕಾಮಗಾರಿಯನ್ನು ಇದು ಒಳಗೊಂಡಿದೆ.

Key  words: Experimental-GPS-based- toll - come - Bengaluru-Mysore -highway

Tags :

.