HomeBreaking NewsLatest NewsPoliticsSportsCrimeCinema

ಪಂಚೆ ಧರಿಸಿ ಬಂದಿದ್ದ ರೈತನಿಗೆ ಮಾಲ್ ನಲ್ಲಿ ಅಪಮಾನ

11:38 AM Jul 17, 2024 IST | prashanth

ಬೆಂಗಳೂರು,ಜುಲೈ,17,2024 (www.justkannada.in):  ಪಂಚೆ ಧರಿಸಿ ಬಂದಿದ್ದಕ್ಕೆ ಬೆಂಗಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ರೈತರೊಬ್ಬರಿಗೆ ಅಪಮಾನ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ಮಾಲ್ ನಲ್ಲಿ ಈ ಘಟನೆ ನಡೆದಿದೆ. ಹಾವೇರಿಯ ಫಕೀರಪ್ಪ ಎಂಬ ರೈತರಿಗೆ ಮಾಲ್ ನ ಸಿಬ್ಬಂದಿ ಅಪಮಾನಿಸಿದ್ದಾರೆ. ನಾಗರಾಜ್ ಎಂಬುವವರು ತಮ್ಮ ತಂದೆ ಫಕೀರಪ್ಪರನ್ನ  ಮಾಲ್ ನಲ್ಲಿ ಸಿನಿಮಾ ತೋರಿಸಲು ಕರೆದುಕೊಂಡು ಬಂದಿದ್ದರು.

ಆದರೆ ಫಕೀರಪ್ಪ ಅವರು ಪಂಚೆ ಧರಿಸಿ ಬಂದಿದ್ದ ಹಿನ್ನೆಲೆಯಲ್ಲಿ ಮಾಲ್ ಸಿಬ್ಬಂದಿ ಒಳಕ್ಕೆ ಬಿಡದೇ ಅಪಮಾನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿ ಮಾಲ್ ವಿರುದ್ದಆಕ್ರೋಶ ಹೊರ ಹಾಕಿರುವ  ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತ ಕುಮಾರ್, ರೈತರನ್ನ ಮಾಲ್ ಒಳಕ್ಕೆ  ಬಿಡದೆ ಸಿಬ್ಬಂದಿ ಅಪಮಾನ ಮಾಡಿದ್ದಾರೆ.  ಜಿಟಿ ಮಾಲ್ ಮಾಲೀಕ ಅನ್ನ ತಿನ್ನಲ್ವಾ. ಇದನ್ನ ಸಹಿಸಲ್ಲ. ನಾವು ಪ್ರತಿಭಟನೆ ಮಾಡುತ್ತೇವೆ. ಮಾಲ್ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಬೇಕು. ರಾಜ್ಯದ ಎಲ್ಲಾ ಮಾಲ್ ಗೆ ನುಗ್ಗಿ ರೈತರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

Key words: farmer, insulted, Bangalore, mall

Tags :
Bangalorefarmerinsultedmall
Next Article