HomeBreaking NewsLatest NewsPoliticsSportsCrimeCinema

ಫೆ.29ರಿಂದ ಮಾ.9ರವರೆಗೆ ರಾಷ್ಟ್ರೀಯ ಸರಸ್ ಮೇಳ- ಸಚಿವ ಶರಣ್ ಪ್ರಕಾಶ್ ಪಾಟೀಲ್

05:50 PM Feb 23, 2024 IST | prashanth

ಬೆಂಗಳೂರು ಫೆಬ್ರವರಿ,23,2024(www.justkannada.in):  ಮಹಿಳೆಯರ ಸಬಲೀಕರಣ ಮತ್ತು ಸ್ವಾವಲಂಬನೆಗೊಳಿಸುವ ಏಕೈಕ ಉದ್ದೇಶದಿಂದ  ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇದೇ ತಿಂಗಳ 29ರಿಂದ ಮಾ.9ರವರೆಗೆ ರಾಷ್ಟ್ರೀಯ ಸಾರಸ್ ಮೇಳ ಮತ್ತು ಬೃಹತ್ ರಾಷ್ಟೀಯ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜನೆ ಮಾಡಲಾಗಿದೆ.

ಈ ಸಂಬಂಧ ಶುಕ್ರವಾರ ವಿಕಾಸಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಶಾಸಕರಾದ ಎಸ್.ಟಿ.ಸೋಮಶೇಖರ್,  ಶ್ರೀನಿವಾಸ್ ಸೇರಿದಂತೆ ಮತ್ತಿತರ ಅಧಿಕಾರಿಗಳು, ನಮ್ಮ ಸರಸ್ ಮೇಳ 2024 ಮತ್ತು ಅಕ್ಕ ಕೆಫೆ ಲೋಗೋ ಅನಾವರಣಗೊಳಿಸಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಬೃಹತ್ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳ ಇದೇ ತಿಂಗಳ 29ರಿಂದ ಮಾ.9ರವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಸರಸ್ ಮೇಳವು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮವಾಗಿದ್ದು, ಇದರಲ್ಲಿ ದೇಶಾದ್ಯಂತದ 250 ಸ್ವ-ಸಹಾಯ ಗುಂಪುಗಳು ಭಾಗವಹಿಸಲಿವೆ. ಗುಂಪುಗಳು ಉತ್ಪಾದಿಸಿದ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುತ್ತವೆ. ಈ ಕಾರ್ಯಕ್ರಮವು ಕರ್ನಾಟಕದಾದ್ಯಂತ ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ಮತ್ತು ವಿವಿಧ ರೀತಿಯ ಆಹಾರ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ಕಾರ್ಯಕ್ರಮವು ವಿವಿಧ ಗಣ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದರು.

ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಮತ್ತಿತರರು ಉದ್ಘಾಟಿಸಲಿದ್ದಾರೆ. ಸರ್ಕಾರ ಈ ಮೇಳಕ್ಕೆ ವಿಶೇಷವಾದ ಒತ್ತು ಕೊಟ್ಟಿದೆ. ಏಕೆಂದರೆ ಬದಲಾವಣೆಯಾಗುವುದಾದರೆ ಅದು ಮಹಿಳೆಯರಿಂದ ಸಾಧ್ಯ ಎಂಬುದು ನಮ್ಮ ಸರ್ಕಾರಕ್ಕೆ ಅರ್ಥವಾಗಿದೆ.  ಹಾಗಾಗಿ ಇದಕ್ಕೆ ವಿಶೇಷ ಒತ್ತು ಕೊಟ್ಟಿದ್ದೇವೆ ಎಂದು ಪಾಟೀಲ್ ತಿಳಿಸಿದರು.

ಬೃಹತ್ ಉದ್ಯೋಗ ಮೇಳ

ಈಗಾಗಲೇ ನಿಗದಿಯಾಗಿರುವಂತೆ ಬೆಂಗಳೂರಿನ ಅರಮನೆ ಮೈದಾನದಲ್ಲಿ 22 ದಿನಗಳ ಬೃಹತ್ ಉದ್ಯೋಗ ಮೇಳ ನಡೆಯಲಿದೆ.  ಎಂಜಿನಿಯರಿಂಗ್, ಡಿಪ್ಲೊಮಾ, ಐಟಿಐ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳನ್ನು ಮುಗಿಸಿದ ಉದ್ಯೋಗ ಆಕಾಂಕ್ಷಿಗಳಿಗೆ ಒಂದೇ ಸೂರಿನಡಿ ಉದ್ಯೋಗ  ಕಲ್ಪಿಸಿಕೊಡುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಇದಕ್ಕಾಗಿ ನಮ್ಮ ಸಿದ್ದತೆಗಳು ಮುಕ್ತಾಯ ಹಂತದಲ್ಲಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ಈ ರೀತಿಯ ಕರಕುಶಲ ವಸ್ತು ಪ್ರದರ್ಶನ ಬೆಂಗಳೂರಿನಲ್ಲಿ ಇಡೀ ವರ್ಷ ನಡೆಯಲು ಅನುಕೂಲವಾಗುವಂತೆ ಶಾಶ್ವತ ಪ್ರದರ್ಶನ ಕೇಂದ್ರಕ್ಕೆ ಸ್ಥಳಾವಕಾಶ ಕಲ್ಪಿಸಲು ಹುಡುಕಾಟ ನಡೆಯುತ್ತಿದೆ. ಬ್ರಾಂಡ್ ಬೆಂಗಳೂರು ಅಭಿಯಾನದಡಿಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿತ್ತಿದೆ ಎಂದರು.

ಬೇರೆ ರಾಜ್ಯಗಳಿಂದ 100 ಮಹಿಳೆಯರು ಮಳಿಗೆಗಳನ್ನು ಹಾಕುತ್ತಿದ್ದಾರೆ ನಮ್ಮ ರಾಜ್ಯದ ಮಹಿಳೆಯರು ಸಹ 150 ಮಳಿಗೆಯನ್ನು ಹಾಕುತ್ತಿದ್ದಾರೆ ಪಾಟೀಲ್ ಮಾಹಿತಿ ನೀಡಿದರು.

ENGLISH SUMMARY..

SARAS MELA TO BE HELD AT NATIONAL COLLEGE GROUND FROM FEB 29 TO MARCH 9: Dr. SHARAN PRAKASH PATIL

BENGALURU TO HOST SARAS MELA TO EMPOWER WOMEN ENTREPRENUERS AND SELF-HELP GROUPS

• SARAS MELA – 2024 and Akka Café logo unveiled

• Over 250 self-help groups from across the country to take part in the fair

• Products by craftswomen to be exhibited in the fair

Bengaluru, February 23: In an effort to empower women and make them self-reliant, the state will hold the National SARAS mela and mega national exhibition and trade fair from February 29 to March 9 at National College ground here.

The logo for ‘Namma Saras Mela 2024 and Akka Café were unveiled on Friday in a ceremony at Vikasa Soudha attended by Deputy Chief Minister DK Shivakumar, Skill Development and Livelihood Minister Dr. Sharan Prakash Patil, MLAs ST Somashekar, Srinivas and senior officials.

Addressing the media after unveiling the logo, Minister Dr. Sharan Prakash Patil said that the fair is being organised by the Skill Development and Livelihood department. “This mega exhibition and trade fair under the National Livelihood Mission will be held from February 29 to March 9. The Saras mela is a national level programme and over 250 women self-help groups are expected to participate and exhibit their products in the fair,” Dr Patil said.

The minister added that the variety of handicrafts and food products produced by self-help groups across Karnataka will be exhibited and well-known artistes will also perform. “We are giving thrust to this fair as our government believes only women can bring changes.”

Chief Minister Siddaramaiah and Deputy Chief Minister DK Shivakumar will inaugurate the mela.

MEGA JOB FAIR

Reiterating the state Government’s initiative to address unemployment, Dr. Patil said that the upcoming mega job fair will help unemployed youths greatly. “The arrangements for the two-day mega job fair at Palace Ground are in the final stage. The government’s aim is to help job aspirants who have completed degree, engineering, diploma, ITI and other job-oriented courses to find jobs as per their requirements under one roof,” informed the minister.

Deputy Chief Minister DK Shivakumar announced that the government is looking for a permanent place for holding such exhibitions and trade fairs throughout the year in Bengaluru. He said such programmes are being conducted under Brand Bengaluru mission.

Minister Dr. Sharan Prakash Patil informed that women self-help groups from other states will set up 100 stalls while women from Karnataka will put up 150 stalls in the fair.

Key words: Feb. 29 to March 9 - National Saras Mela – Minister- Sharan Prakash Patil

Tags :
Feb. 29 to March 9ministerNational Saras MelaSharan Prakash Patil.
Next Article