For the best experience, open
https://m.justkannada.in
on your mobile browser.

ಚಾಮುಂಡಿಬೆಟ್ಟದ ಸುತ್ತಲಿನ ಒತ್ತುವರಿ ಬೇಲಿ ತೆಗೆಸಲು ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಸವಾಲು

04:06 PM Aug 16, 2024 IST | mahesh
ಚಾಮುಂಡಿಬೆಟ್ಟದ ಸುತ್ತಲಿನ ಒತ್ತುವರಿ ಬೇಲಿ ತೆಗೆಸಲು ಕಾಂಗ್ರೆಸ್‌ ವಕ್ತಾರ ಎಂ ಲಕ್ಷ್ಮಣ್‌ ಸವಾಲು

ಮೈಸೂರು, ಆ.16,2024: (www.justkannada.in news) ಚಾಮುಂಡಿಬೆಟ್ಟ ಅಭಿವೃದ್ಧಿಗಾಗಿ ಸರಕಾರ ರಚಿಸಿದ ಪ್ರಾಧಿಕಾರದ ಬಗ್ಗೆ ಕೊಂಕು ಮಾತನಾಡುವವರು ಚಾಮುಂಡಿ ಬೆಟ್ಟದ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ಬೇಲಿ ಹಾಕಿಕೊಂಡಿರುವ ಮಠಾಧೀಶರುಗಳ ಬಗೆಗೂ ಮಾತಾಡಲಿ. ಈ ಬೇಲಿಯನ್ನು ತೆರವು ಮಾಡಿಸಲಿ ಎಂದು ಕೆ.ಪಿ.ಸಿ.ಸಿ ವಕ್ತಾರ ಎಂ.ಲಕ್ಷ್ಮಣ್‌ ಸವಾಲು ಹಾಕಿದರು.

ಕೆಪಿಸಿಸಿ ಸೂಚನೆ ಮೇರೆಗೆ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ವಕ್ತಾರ ಎಂ.ಲಕ್ಷ್ಮಣ್‌ ಹೇಳಿದಿಷ್ಟು..

ಚಾಮುಂಡಿಬೆಟ್ಟದ ಅಭಿವೃದ್ಧಿಗೆ ಪ್ರಾಧಿಕಾರ ರಚನೆಗೆ ಒತ್ತಾಯಿಸಿ ಪತ್ರ ಬರೆದಿರುವ ಶಾಸಕ, ಸಂಸದರೇ ಈಗ ಸರಕಾರ ಪ್ರಾಧಿಕಾರ ರಚನೆಗೆ ಮುಂದಾಗುತ್ತಿದ್ದಂತೆ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಕೆ.ಪಿ.ಸಿ.ಸಿ ವಕ್ತಾರ ಎಂ.ಲಕ್ಷ್ಮಣ್‌ ಟೀಕಿಸಿದರು.

ಚಾಮುಂಡಿಬೆಟ್ಟದ ಸುತ್ತಲಿನ ಜಾಗ ಸಂಪೂರ್ಣ ಒತ್ತುವರಿಯಾಗಿದೆ. ಎಲ್ಲಾ ವರ್ಗದ ಮಠಾಧೀಶರು ಜಾಗಕ್ಕೆ ಬೇಲಿ ಹಾಕಿಕೊಂಡಿದ್ದಾರೆ. ಪ್ರಾಧಿಕಾರ ರಚನೆ ವಿರೋಧಿಸುವವರು ಈ ಬೇಲಿಯನ್ನು ತೆರವುಗೊಳಿಸಲಿ ಎಂದರು.

ಪ್ರಸ್ತುತ ನಿಮ್ಮದೆ ಸರಕಾರ ಆಡಳಿತದಲ್ಲಿದೆ, ನೀವೆ ಯಾಕೆ ಒತ್ತುವರಿ ತೆರವುಗೊಳಿಸಬಾರದು ಎಂಬ ಪತ್ರಕರ್ತರ ಪ್ರಶ್ನೆಗೆ, ಒಮ್ಮೆ ಪ್ರಾಧಿಕಾರ ರಚನೆಯಾಗಲಿ. ಆಗ ಪ್ರಾಧಿಕಾರ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಲಕ್ಷ್ಮಣ್‌ ಉತ್ತರಿಸಿದರು.

last byte: ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಒಬ್ಬರು ಬೆಟ್ಟದ ಸುತ್ತಲಿನ ಒತ್ತುವರಿ ತೆರವಿಗೆ “ಹರ್ಷ”ದಿಂದಲೇ ಮುಂದಾಗಿದ್ದರು. ಆದರೆ ತೆರವು ಕಾರ್ಯಚರಣೆ ಆರಂಭಗೊಂಡ ಕೆಲ ಗಂಟೆಗಳಲ್ಲೇ “ಗುಪ್ತ” ಶಕ್ತಿಯ ಕೈವಾಡದಿಂದ ಜಿಲ್ಲಾಧಿಕಾರಿ ವರ್ಗಾವಣೆಗೊಂಡರು.

key words: Congress spokesperson, M Lakshmanan, challenges, removal of, encroachment, fencing, around Chamundi Hill

SUMMARY: Congress spokesperson M Lakshmanan challenges removal of encroachment fencing around Chamundi Hill

Tags :

.