ಮೈಸೂರಿನ ಮತ್ತೊಂದು ಆಸ್ಪತ್ರೆಯಲ್ಲೂ ಭ್ರೂಣ ಹತ್ಯೆ: ಹೆಡ್ ನರ್ಸ್ ಬಂಧನ.
ಮೈಸೂರು,ಡಿಸೆಂಬರ್,4,2023(www.justkannada.in): ಮೈಸೂರಿನಲ್ಲಿ ಭ್ರೂಣ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ನಗರದ ಮತ್ತೊಂದು ಆಸ್ಪತ್ರೆಯಲ್ಲೂ ಕೂಡ ಭ್ರೂಣ ಹತ್ಯೆ ನಡೆಯುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಮೈಸೂರಿನ ಚಾಮುಂಡೇಶ್ವರಿ ಆಸ್ಪತ್ರೆಯಲ್ಲಿ ಕೂಡ ಭ್ರೂಣ ಹತ್ಯೆ ದಂಧೆ ನಡೆಯುತ್ತಿತ್ತು ಎನ್ನಲಾಗಿದ್ದು, ಈ ಸಂಬಂಧ ಆಸ್ಪತ್ರೆಯ ಹೆಡ್ ನರ್ಸ್ ಉಷಾರಾಣಿ ಎನ್ನುವವರನ್ನ ಪೊಲೀಸರು ಬಂಧಿಸಿದ್ದಾರೆ. ತಿಂಗಳಲ್ಲಿ ಸಾಕಷ್ಟು ಭ್ರೂಣ ಹತ್ಯೆ ಮಾಡಿದ ಅಂಶ ಬೆಳಕಿಗೆ ಬಂದಿದೆ.
ಬ್ರೋಕರ್ ಪುಟ್ಟರಾಜು ಅಣತಿಯಂತೆ ಮಹಿಳೆಯರಿಗೆ ಅಭಾರ್ಷನ್ ಮಾಡಲಾಗುತ್ತಿತ್ತು. ಪುಟ್ಟರಾಜು ಮಾತಾ ಮತ್ತು ಚಾಮುಂಡೇಶ್ವರಿ ಆಸ್ಪತ್ರೆಗೆ ಗರ್ಭೀಣಿಯರ ಕರೆದುಕೊಂಡು ಹೋಗುತ್ತಿದ್ದ. ಚಾಮುಂಡೇಶ್ವರಿ ಆಸ್ಪತ್ರೆ ನರ್ಸ್ ಉಷಾರಾಣಿ ಗರ್ಭಿಣಿಯರಿಗೆ ಅಬಾರ್ಷನ್ ಮಾಡುತ್ತಿದ್ದರು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಉಷಾರಾಣಿಯನ್ನ ಪೊಲೀಸರು ಬಂಧಿಸಿದ್ದಾರೆ.
ಇನ್ನು ಚಾಮುಂಡೇಶ್ವರಿ ಆಸ್ಪತ್ರೆಯ ಮಾಲೀಕ ಜಗದೀಶ್ ರನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಆಸ್ಪತ್ರೆಯ ದಾಖಲಾತಿಗಳನ್ನು ನೀಡುವಂತೆ ನೋಟೀಸ್ ನೀಡಿದ್ದಾರೆ.
Key words: Fetal killing - another hospital – Mysore- head nurse- arrested.