ಕೆ.ಎಸ್ ಈಶ್ವರಪ್ಪ ವಿರುದ್ದ ಎಫ್ ಐಆರ್, ನೋಟಿಸ್: ಮಾಜಿ ಸಿಎಂ ಬಿಎಸ್ ವೈ ಪ್ರತಿಕ್ರಿಯೆ ಏನು..?
01:00 PM Feb 10, 2024 IST
|
prashanth
ಶಿವಮೊಗ್ಗ,ಫೆಬ್ರವರಿ,10,2024(www.justkannada.in): ರಾಷ್ಟ್ರಧ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕು ಎಂಬ ಹೇಳಿಕೆ ಸಂಬಂಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ದ ಎಫ್ ಐಆರ್ ದಾಖಲಾಗಿರುವ ಕುರಿತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿರುವ ಬಿ.ಎಸ್ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ ಹೇಳಿಕೆ ಕುರಿತು ಸುಖಾಸುಮ್ಮನೆ ತಿರುಚೋದು ಬೇಡ. ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಅಪಾರ್ಥ ಕಲ್ಪಿಸೋದು ಬೇಡ. ಎಫ್ ಐಆರ್ ಹಾಕಿದ್ರೂ ತೊಂದರೆ ಇಲ್ಲ ಹೆದರಿಸುತ್ತೇವೆ ಎಂದರು.
ಈಶ್ವರಪ್ಪ ಅವರು ದೇಶದ್ರೋಹಿಗಳಿಗೆ ಗುಂಡಿಕ್ಕಿ ಕೊಲ್ಲುವ ಕಾನೂನು ತನ್ನಿ ಅಂತ ಹೇಳಿದ್ದು, ಅದರಿಂದ ಇವತ್ತು ಅವರ ವಿರುದ್ಧ ಟಿಕೆ ಟಿಪ್ಪಣಿಗಳ ನಡೆಯುತ್ತಿವೆ. ಅವರು ಹೇಳಿರುವದಕ್ಕೂ ಇದಕ್ಕೂ ಏನು ಸಂಬಂಧ ಇಲ್ಲ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.
Key words: FIR -against -KS Eshwarappa-Notice-former CM –BS Yeddyurappa
Next Article