For the best experience, open
https://m.justkannada.in
on your mobile browser.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಗೆ ಬೆದರಿಕೆ ಹಾಕಿದ್ದವರ ವಿರುದ್ಧ ಎಫ್ ಐಆರ್ ದಾಖಲು.

11:19 AM Oct 30, 2023 IST | prashanth
ಕೆಪಿಸಿಸಿ ವಕ್ತಾರ ಎಂ  ಲಕ್ಷ್ಮಣ್‌ ಗೆ ಬೆದರಿಕೆ ಹಾಕಿದ್ದವರ ವಿರುದ್ಧ ಎಫ್ ಐಆರ್ ದಾಖಲು

ಮೈಸೂರು,ಅಕ್ಟೋಬರ್,30,2023(www.justkannada.in):  ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಗೆ ಬೆದರಿಕೆ ಕರೆ ಮಾಡಿದ್ದ ಆರೋಪದ ಮೇಲೆ ಜೆಡಿಎಸ್ ಕಾರ್ಯಕರ್ತರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಈ ಸಂಬಂಧ ಅಕ್ಟೋಬರ್ 28 ರಂದು ನಗರ ಪೊಲೀಸ್ ಆಯುಕ್ತರಿಗೆ ಎಂ. ಲಕ್ಷ್ಮಣ್ ದೂರು ದಾಖಲಿಸಿದ ಹಿನ್ನೆಲೆ.  ಕರೆ ಮಾಡಿ ಬೆದರಿಕೆ ಹಾಕಿದ್ದವರ ಮೇಲೆ ನಗರದ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ದೂರವಾಣಿ ಕರೆಯಲ್ಲಿ ಎಂ ಲಕ್ಷ್ಮಣ್‌ಗೆ ಜೆಡಿಎಸ್ ಕಾರ್ಯಕರ್ತನೋರ್ವ  ಕುಮಾರಸ್ವಾಮಿ ಬಗ್ಗೆ ಮಾತನಾಡದಂತೆ ಅವಾಜ್ ಹಾಕಿದ್ದು, ಎಂ.ಲಕ್ಷ್ಮಣ್‌ ಗೆ ಬೆದರಿಕೆ ಹಾಕಿರುವ ಆಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಭದ್ರತೆ ಕೋರಿ ಹೆಚ್.ಡಿ ಕುಮಾರಸ್ವಾಮಿ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರ ಮೇಲೆ ಎಂ ಲಕ್ಷ್ಮಣ್ ದೂರು ನೀಡಿದ್ದರು. ದೂರು ದಾಖಲಿಸಿದ ಹಿನ್ನಲೆ ಹೆಚ್.ಡಿಕೆ ಆಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರ ಮೇಲೆ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.

ದಿನಾಂಕ 26 ರಂದು ಪತ್ರಿಕಾಗೋಷ್ಠಿ ನಡೆಸಿ ಹೆಚ್ ಡಿ ಕುಮಾರಸ್ವಾಮಿ ಅವರ ಆಧಾರ ರಹಿತ ಆರೋಪಕ್ಕೆ ಎಂ.ಲಕ್ಷ್ಮಣ್ ಸ್ಪಷ್ಟೀಕರಣ  ದಾಖಲೆ ಕೇಳಿದ್ದರು. ದಾಖಲೆ ಕೇಳಿದ್ದಕ್ಕೆ ಹೆಚ್.ಡಿಕೆ ಅಭಿಮಾನಿಗಳಿಂದ ಎಂ ಲಕ್ಷ್ಮಣ್‌ಗೆ ಬೆದರಿಕೆ ಹಾಕಲಾಗಿತ್ತು. ಕಮಿಷನರ್ ಕಚೇರಿಗೆ ದೂರು ದಾಖಲಿಸುವ ವೇಳೆಯು ಲಕ್ಷ್ಮಣ್‌ಗೆ ಹೆಚ್ಡಿಕೆ ಅಭಿಮಾನಿಯಿಂದ ಕರೆ ಬಂದಿತ್ತು ಈ ವೇಳೆ ಕರೆಯಲ್ಲಿ ಹೆಚ್ಡಿಕೆ ಅಭಿಮಾನಿ ಅವಾಜ್ ಹಾಕಿದರು ಎನ್ನಲಾಗಿದೆ.

ನಿರಂತರವಾಗಿ ನನಗೆ ಹೆಚ್ಡಿಕೆ ಅಭಿಮಾನಿಗಳು ಜೆಡಿಎಸ್‌ ಕಾರ್ಯಕರ್ತರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ನಮ್ಮ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದಿದ್ದಾರೆ. ಅಷ್ಟೇ ಅಲ್ಲದೆ ನನ್ನ ಮೇಲೆ ಅಟ್ಯಾಕ್ ಮಾಡುತ್ತೇವೆ ಎಂದು ಬೆದರಿಕೆ ಕರೆ ಮಾಡುತ್ತಿದ್ದಾರೆ. ಹೀಗಾಗಿ ನನಗೆ ರಕ್ಷಣೆ, ಬೆದರಿಕೆ ಕರೆ ಮಾಡುತ್ತಿರುವವರ ಮೇಲೆ ಕ್ರಮಕ್ಕೆ ಕಮಿಷನರ್‌ ಗೆ ದೂರು ನೀಡಿದ್ದರು.

ಠಾಣೆ ಎನ್.ಸಿ.ಆರ್ ನಂ 114/2023 ರಿತ್ಯಾ ದೂರು ದಾಖಲು ಮಾಡಿ ಠಾಣಾ ನ್ಯಾಯಾಲಯದ ಸಿಬ್ಬಂದಿ ಪಿ.ಸಿ 558 ರವರ ಮುಖೇನ 4 ನೇ ಜೆ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರಿಂದ ಅನುಮತಿ ಆದೇಶ ಪಡೆದು ದೂರು ದಾಖಲಿಸಲಾಗಿತ್ತು ಆರೋಪಿಗಳ ಬಗ್ಗೆ ಮಾಹಿತಿ ಪಡೆಯಲು ಸೈಬರ್ ತನಿಖೆ ನಡೆಸುತ್ತಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ‌ ಮುಂದಾಗಿದ್ದಾರೆ.

Key words: FIR –registered- against - threatened -KPCC spokesperson –M.Laxman.

Tags :

.